ಪುತ್ತೂರು: ಎಪಿಎಂಸಿ ಯಾರ್ಡ್ನಲ್ಲಿ ಕುಡಿಯುವ ನೀರಿನ ಪೈಪ್‌ಗಳಿಗೆ ಹಾನಿ ಮಾಡಿದ ಘಟನೆ ಕಳೆದ ಎರಡು ಮೂರು ದಿನಗಳಿಂದ ನಡೆಯುತ್ತಿದ್ದು, ಮಾ.೨೦ರಂದು ಮತ್ತೆ ಕೃತ್ಯ ಪುನರಾಂಭಿಸಿದಾಗ ಈ ಹಿಂದೆ ಎಪಿಎಂಸಿಯಲ್ಲಿ ಪ್ರಭಾರ ಕಾರ್ಯದರ್ಶಿ ಹುದ್ದೆಯಲ್ಲಿದ್ದ ರಾಮಚಂದ್ರ ಎಂಬವರು ಪೈಪ್‌ಗಳಿಗೆ ಹಾನಿ ಮಾಡಿರುವುದು ಬೆಳಕಿಗೆ ಬಂದಿದ್ದು, ಇದನ್ನು ವಿಚಾರಸಿದ ವೇಳೆ ಎಪಿಎಂಸಿ ಕಾರ್ಯದರ್ಶಿ ನಿವಾಸದ ಮುಂದೆ ಮಾತಿನಚಕಮಕಿ ನಡೆದಿದೆ.

ಈ ಹಿಂದೆ ಪುತ್ತೂರು ಎಪಿಎಂಸಿ ಪ್ರಭಾರ ಕಾರ್ಯದರ್ಶಿಯಾಗಿದ್ದ ರಾಮಚಂದ್ರ ಅವರು ಪುತ್ತೂರು ಎಪಿಎಂಸಿ ಯಾರ್ಡ್ನ ವಸತಿಗೃಹದಲ್ಲೇ ವಾಸ್ತವ್ಯ ಹೊಂದಿದ್ದಾರೆ.
ರಾಮಚಂದ್ರ ಅವರು ಹಾಲಿ ಕಾರ್ಯದರ್ಶಿ ಎಂ.ಸಿ ಪಾಡಗಾನೂರು ಅವರ ವಸತಿಗೃಹಕ್ಕೆ ಹೋಗುವ ಕುಡಿಯುವ ನೀರಿನ ಪೈಪ್ ಅನ್ನು ತುಂಡರಿಸಿದಲ್ಲದೆ ಅವರ ಪತ್ನಿ, ಮಗನಿಗೆ ಅವಾಚ್ಯಶಬ್ದದಿಂದ ನಿಂಧಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಮಾ.೨೦ರಂದು ಮಧ್ಯಾಹ್ನದ ವೇಳೆ ಎಪಿಎಂಸಿ ಕಾರ್ಯದರ್ಶಿ, ಅವರ ಪತ್ನಿ, ಮಗ ಪೊಲೀಸರಿಗೆ ದೂರು ನೀಡಿದ್ದಾರೆ.