ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಸಂಬಂಧಿಸಿದ ಜಾಗವೊಂದು ನ್ಯಾಯಾಲಯದ ಮುಖಾಂತರ ಮತ್ತೆ ದೇವಾಲಯದ ಸುಪರ್ಧಿಗೆ ಬಂದಿದ್ದು, ಅದರಲ್ಲಿದ್ದ ಕಟ್ಟಡ ತೆರವುಗೊಳಿಸಲಾಯಿತು.
ಕಾಶಿಕಟ್ಟೆ ರಥಬೀದಿಯ ಮಧ್ಯದ ಅಂಚೆ ಕಛೇರಿ ಮುಂಭಾಗದಲ್ಲಿನ ಜಾಗದ ಬಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಹಾಗೂ ಕುಂಞಕ್ಕ ಎಂಬವರಿಗೆ ತಕರಾರು ಇತ್ತೆನ್ನಲಾಗಿದೆ.

ಈ ಪ್ರಕರಣ ಇದೀಗ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದ್ದು ಜಾಗವು ದೇವಾಲಯಕ್ಕೆ ಸಂಬಂಧಿಸಿದ ಜಾಗವೆಂದು ಆದೇಶವಾಗಿದೆ.
ಇದರನ್ವಯ ಕಂದಾಯ ಇಲಾಖೆಯ ವತಿಯಿಂದ ಜಾಗದ ಹಕ್ಕನ್ನು ದೇವಾಲಯಕ್ಕೆ ಹಸ್ತಾಂತರಿಸಿದ್ದು ಅದರಂತೆ ಜಾಗದಲ್ಲಿದ್ದ ಹಳೆ ಕಟ್ಟಡ ತೆರವು ಕಾರ್ಯಾಚರಣೆ ನಡೆಯಿತು.
ಈ ಸಂದರ್ಭದಲ್ಲಿ ದೇವಾಲಯದ ಅಧಿಕಾರಿಗಳು, ಸಿಬ್ಬಂದಿಗಳು ಭದ್ರತಾ ಸಿಬ್ಬಂದಿಗಳು ಉಪಸ್ಥಿತರಿದ್ದರು.