ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ವಿಟ್ಲ ಘಟಕ ಹಾಗೂ ಸಾರ್ವಜನಿಕ ಶ್ರೀ ದುರ್ಗಾ ಪೂಜಾ ಸಮಿತಿ ಇದರ ವತಿಯಿಂದ ನಡೆಯುವ ದುರ್ಗಾ ನಮಸ್ಕಾರ ಪೂಜೆ ಹಾಗೂ ಅರ್ಧ ಏಕಾಹ ಭಜನಾ ಕಾರ್ಯಕ್ರಮದ ಉದ್ಘಾಟನೆಯನ್ನು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಇಕೋ ವಿಷನ್ ಬಲಿಪಗುಳಿ ಇದರ ಮಾಲೀಕರಾದ ರಾಜಾರಾಮ್ ಭಟ್ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಉದ್ಯಮಿಗಳಾದ ಭಾಸ್ಕರ್ ರೈ, ವಿರಾಜ್ ಕುಲಾಲ್, ಸಮಿತಿಯ ಪದಾಧಿಕಾರಿಗಳಾದ ಶ್ರೀಕೃಷ್ಣ ಕೇಪು, ಕೃಷ್ಣಯ್ಯ ಕೆ, ಸೇರಾಜೆ ಸುಬ್ರಹ್ಮಣ್ಯ ಭಟ್, ಅಶೋಕ್ ಕುಮಾರ್ ಶೆಟ್ಟಿ, ರಘುರಾಮ್ ರೈ, ಮೋಹನ್ ಸೇರಾಜೆ, ಹರೀಶ್ ಮರುವಾಳ, ಶ್ರೀಕೃಷ್ಣ ವಿಟ್ಲ, ಶರತ್ ಎನ್ ಎಸ್, ಲಕ್ಷ್ಮಣ ಮಾಡ,ಜಯರಾಮ್ ಬಲ್ಲಾಳ್, ರಾಜೇಶ್ ಕರವೀರ, ಸುಧೀರ್ ನಾಯ್ಕ್, ಹರೀಶ್ ಕಟ್ಟೆ, ವಿಶ್ವೇಶ್ವರ ಆಲಂಗಾರು, ಜಯಂತ ಸೂರ್ಯ, ರಾಜೇಶ್ ಗಾಳಿಹಿತ್ಲು ಉಪಸ್ಥಿತರಿದ್ದರು.