ಬೆಂಗಳೂರು: ಬಹುಮಹಡಿ ಕಟ್ಟಡದಿಂದ ತಳ್ಳಿ ಹೆತ್ತ ತಾಯಿಯನ್ನು ಮಗನೇ ಕೊಲೆ ಮಾಡಿರುವ ಅಮಾನವೀಯ ಘಟನೆ ಬೆಂಗಳೂರಿನ ಆರ್‌ಆರ್ ನಗರ ಬೆಮಲ್ ಲೇಔಟ್‌ನಲ್ಲಿ ನಡೆದಿದೆ. ಪುತ್ರ ವೆಂಕಟೇಶ್ ಎನ್ನುವಾತನೆ ತನ್ನ ಹೆತ್ತ ತಾಯಿ ಸಾವಿತ್ರಮ್ಮ(72)ರನ್ನು ಮಹಡಿ ಮೇಲಿಂದ ತಳ್ಳಿ ಕೊಂದಿದ್ದಾನೆ. ಪಾರ್ಶ್ವವಾಯು ಪೀಡಿತರಾಗಿದ್ದ ಸಾವಿತ್ರಮ್ಮ,ಸುಮಾರು ಐದಾರು ವರ್ಷದಿಂದ ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ಬೇಸತ್ತು ತಾಯಿ ಸಾವಿತ್ರಮ್ಮಳನ್ನ 3ನೇ ಮಹಡಿಯಿಂದ ತಳ್ಳಿದ್ದಾನೆ.
ಸುಮಾರು ವರ್ಷಗಳಿಂದ ಸಾವಿತ್ರಮ್ಮ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ತಾಯಿ ಅವಸ್ಥೆಯಿಂದ ನೊಂದು ಪುತ್ರ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆರ್‌ಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮಗ ವೆಂಕಟೇಶ್‌ನನ್ನ ಆರ್‌ಆರ್ ನಗರ ಪೊಲೀಸರು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ.



























