ಬೆಂಗಳೂರು: ಮಧ್ಯಪ್ರಾಚ್ಯ ದೇಶವಾದ ಬಹ್ರೇನ್ ನಿಂದ ಬೆಂಗಳೂರಿಗೆ ವಿಮಾನ ದಲ್ಲಿ ಬರುವಾಗ ಗಗನಸಖಿಯ ಸೊಂಟ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ ಕೇರಳ ಮೂಲದ ಪ್ರಯಾಣಿಕನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.
24 ವರ್ಷದ ವಿದೇಶಿ ಮಹಿಳೆ ನೀಡಿದ ದೂರಿನ ಮೇರೆಗೆ ಕೇರಳ ಮೂಲದ ಜಾಕೋಬ್ ಅಲೆಕ್ಸಾಂಡರ್ ಎಂಬಾತನನ್ನು ಬಂಧಿಸಲಾಗಿದೆ.
ಮೇ 4 ರಂದು ಗಲ್ಫ್ ಏರ್‌ವಿಮಾನದಲ್ಲಿ ಬಹ್ರೇನ್ ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುವಾಗ ಘಟನೆ ನಡೆದಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ ಅಲೆಕ್ಸಾಂಡರ್‌ಎಂಬಾತ ತನ್ನ ಸೊಂಟಕ್ಕೆ ಕೈಗಳಿಂದ ಮುಟ್ಟಲು ಯತ್ನಿಸಿದ್ದ ಬೇಡವೆಂದರೂ ಪದೇ ಪದೇ ಸೊಂಟ ಮುಟ್ಟಿ ಚೆನ್ನಾಗಿದೆ ಎಂದು ಹೇಳಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಈ ಬಗ್ಗೆ ನಮ್ಮ ಕ್ಯಾಪ್ಟನ್‌ಗೆ ಮಾಹಿತಿ ನೀಡಲಾಗಿತ್ತು. ಅವರು ವಿಚಾರಿಸಿದಾಗ ಆರೋಪಿ ಅತಿರೇಕ ವರ್ತನೆ ತೋರಿದ್ದಾನೆ. ಅಲ್ಲದೆ, ಫ್ರೆಂಡ್‌ಶಿಪ್ ರೂಪದಲ್ಲಿ ಆಕೆಯ ಸೊಂಟ ಸ್ಪರ್ಶಸಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದ ಹೀಗಾಗಿ ಲೈಂಗಿಕ ಕಿರುಕುಳ ನೀಡಿದ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗಗನಸಖಿ ದೂರಿನಲ್ಲಿ ಆರೋಪಿಸಿದ್ದಾರೆ.
ಈಕೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.



























