ಪುತ್ತೂರು : ಕಳೆದ 46 ವರ್ಷಗಳಿಂದ ಉಚಿತ ಯೋಗ ವಿದ್ಯೆಯನ್ನು ಸಮಾಜಕ್ಕೆ ನೀಡುತ್ತಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ ಇದರ ನೇತ್ರಾವತಿ ವಲಯ ಪುತ್ತೂರು ವಲಯದ ಆಶ್ರಯದಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಜೂನ್21ನೇ ಆದಿತ್ಯವಾರ ಬೆಳಗ್ಗೆ ಗಂಟೆ 4.50ರಿಂದ 7.00ರವರೆಗೆ ತೆಂಕಿಲ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಡಿಟೋರಿಯಂನಲ್ಲಿ ನಡೆಯಲಿದೆ. ಪುತ್ತೂರು, ವಿಟ್ಲ ಸೇರಿದಂತೆ ಸುಮಾರು 1000ಕ್ಕೂ ಮಿಕ್ಕಿ ಯೋಗಬಂಧುಗಳು ಭಾಗವಹಿಸಲಿದ್ದಾರೆ.


























