ಆರ್ಲಪದವು – ಪಾಣಾಜೆ: ಶ್ರೀ ಕಾರ್ತಿಕೇಯ ಮಹಿಳಾ ಭಜನಾ ಮಂಡಳಿಯ ವತಿಯಿಂದ ಗುರುವಂದನೆ ಹಾಗೂ ಭಜನಾ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿರುವ ಮಹನೀಯರ ಸನ್ಮಾನ ಕಾರ್ಯಕ್ರಮವು ಭಕ್ತಿಭಾವದಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ಭಜನಾ ಗುರುಗಳಾದ ಶ್ರೀ ಮದ್ವಾದೀಶ ವಿಠಲ ದಾಸ ನಾಮಾಂಕಿತ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಉಮಾರಾವ್ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು. ಗುರುಗಳ ಮಾರ್ಗದರ್ಶನ ಮತ್ತು ಸೇವೆಯನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸಲಾಯಿತು.
ಭಜನಾ ಸಂಘದ ಚಟುವಟಿಕೆಗಳಿಗೆ ನಿರಂತರ ಸಹಕಾರ ನೀಡುತ್ತಿರುವ ದುರ್ಗಾಸಭಾ ಭವನದ ಮಾಲೀಕರಾದ ಶ್ರೀ ಸುಬ್ರಮಣ್ಯ ಭಟ್ ಹಾಗೂ ಶ್ರೀಮತಿ ಶಂಕರಿ ಸುಬ್ರಮಣ್ಯ ಭಟ್ ಇವರನ್ನು ಗೌರವಿಸಲಾಯಿತು.
ಅಲ್ಲದೆ, ಭಜನಾ ಸಂಘದ ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತು ಸದಾ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡುತ್ತಿರುವ ಶ್ರೀ ಸದಾಶಿವ ರೈ ಸೂರಂಬೈಲು ಹಾಗೂ ಶ್ರೀ ಹರಿ ನಡುಕಟ್ಟ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಶಾರದಾ ಗೋಪಾಲ್ ಕೊಂದಲ್ಕಾನ ಹಾಗೂ ಕಾರ್ಯದರ್ಶಿಯಾದ ಶ್ರೀಮತಿ ಸುಜಾತಾ ಬಟ್ಯ ಮಾಸ್ಟರ್, ಆರ್ಲಪದವು ಇವರನ್ನು ಮಂಡಳಿಯ ಸದಸ್ಯರು ಗೌರವಿಸಿ ಅಭಿನಂದಿಸಿದರು.
ಕಾರ್ಯಕ್ರಮವನ್ನು ಶ್ರೀಮತಿ ಸುಪ್ರೀತ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು. ಶ್ರೀಮತಿ ಸುಜಾತಾ ಅವರು ಧನ್ಯವಾದ ಸಮರ್ಪಿಸಿದರು.
ಕೊನೆಯಲ್ಲಿ ಉಪಹಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ಮುಕ್ತಾಯಗೊಂಡಿತು.


























