ಸುಳ್ಯ: ಕುರುಂಜಿಗುಡ್ಡೆ ಕಡೆಗೆ ತೆರಳುತ್ತಿದ್ದ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಗೆ ಚಲಿಸಿ ಮನೆಯೊಂದಕ್ಕೆ ನುಗ್ಗಿದ ಪರಿಣಾಮ ಮನೆಯು ಭಾಗಶಃ ಹಾನಿಗೊಳಗಾದ ಘಟನೆ ಸಂಭವಿಸಿದೆ.
ಮಂಡ್ಯ ನೋಂದಣಿ ಹೊಂದಿರುವ ಪಿಕಪ್ ವಾಹನವು ಕುರುಂಜಿಗುಡ್ಡೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಏಕಾಏಕಿ ನಿಯಂತ್ರಣ ತಪ್ಪಿ ಹಿಂಬದಿಗೆ ಚಲಿಸಿದೆ ಎನ್ನಲಾಗಿದೆ.
ಬಳಿಕ ರಸ್ತೆ ಬದಿಯಲ್ಲಿದ್ದ ಮನೆಯೊಂದರ ಮೇಲೆ ಬಿದ್ದ ಪರಿಣಾಮ ಮನೆಯ ಒಂದು ಬದಿಯ ಗೋಡೆ ಹಾಗೂ ಇತರ ಭಾಗಗಳು ಜಖಂಗೊಂಡಿವೆ. ವಾಹನದ ಚಾಲಕ ಅಪಾಯದಿಂದ ಪಾರಾಗಿದ್ದಾರೆ.


























