ಪುತ್ತೂರು: ಅಟ್ಲಾಸ್ ವುಡನ್ ಡೋರ್ಸ್, ವಿಂಡೋಸ್ ಮತ್ತು ಹಾರ್ಡ್‌ವೇರ್ ಸಂಸ್ಥೆಯ ನೂತನ ಶೋರೂಂ ಉದ್ಘಾಟನಾ ಸಮಾರಂಭವು ಜೂನ್ 29, 2026ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಪುತ್ತೂರಿನ ಪಡೀಲ್ ಮಸೀದಿ ಸಮೀಪದ ಕಟ್ಟಡದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಗೌರವಾನ್ವಿತ ಶಾಸಕರಾದ ಅಶೋಕ್ ಕುಮಾರ್ ರೈ ಯವರು ಉದ್ಘಾಟಿಸಲಿದ್ದಾರೆ.
ಈ ನೂತನ ಶೋರೂಂನಲ್ಲಿ ಮರದ ಬಾಗಿಲುಗಳು, ಕಿಟಕಿಗಳು ಹಾಗೂ ವಿವಿಧ ಹಾರ್ಡ್‌ವೇರ್ ಉತ್ಪನ್ನಗಳ ವಿಶಾಲ ಸಂಗ್ರಹ ಲಭ್ಯವಿದ್ದು, ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.
ಸಮಾರಂಭದಲ್ಲಿ ಭಾಗವಹಿಸಿ ಶುಭ ಹಾರೈಸುವಂತೆ ಸಂಸ್ಥೆಯ ಮಾಲೀಕರಾದ ಶಶಿಧರನ್ ನಾಯರ್ ಹಾಗೂ ಅಟ್ಲಾಸ್ ತಂಡ ಸಾರ್ವಜನಿಕರು, ಗ್ರಾಹಕರು, ಹಿತೈಷಿಗಳು ಮತ್ತು ಬಂಧು-ಮಿತ್ರರನ್ನು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.



























