ನವಿಲು ಗರಿ ಬಳಸಿ ರೀಲ್ಸ್ ಮಾಡಿದ್ದ ಬಿಗ್‌ಬಾಸ್ ಮಾಜಿ ಸ್ಪರ್ಧಿ ಕಿಶನ್ ಹಾಗೂ ನಟಿ ನಿವೇದಿತಾ ಗೌಡ ಇದೀಗ ಸಂಕಷ್ಟ ಎದುರಾಗಿದೆ.
ರೀಲ್ಸ್‌ನಲ್ಲಿ ಸದಾ ಮಿಂಚುವ ನಿವೇದಿತಾ ಗೌಡ ಡ್ಯಾನ್ಸರ್ ಕಿಶನ್ ಜೊತೆ ಹೇ ನವಿಲೇ ಹಾಡಿಗೆ ಮಾದಕ ಹೆಜ್ಜೆ ಹಾಕಿದ್ದರು. ಇದೀಗ ಈ ಸಂಬಂಧ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ, ರೀಲ್ಸ್ ಮಾಡುವಾಗ ಯಥೇಚ್ಛವಾಗಿ ನವಿಲುಗರಿ ಬಳಸಿದ್ದಾರೆ. ಹೀಗಾಗಿ ಇದನ್ನು ತನಿಖೆ ಮಾಡುವಂತೆ ಉಲ್ಲೇಖಿಸಿದ್ದಾರೆ.ರೀಲ್ಸ್‌ನಲ್ಲಿ ಇಬ್ಬರು ನವಿಲು ಗರಿ ಬಳಸಿ ಮಾಡಲಾದ ಉಡುಗೆಯನ್ನು ಧರಿಸಿ ಸಖತ್ತಾಗಿ ಮಿಂಚಿದ್ದರು. ಸರಳ, ಆಕರ್ಷಕ ಹೆಜ್ಜೆಯೊಂದಿಗೆ ರೀಲ್ಸ್‌ಗೆ ಹೆಜ್ಜೆ ಹಾಕಿದ್ದರು. ಮೈಗೆ ನವಿಲಿನ ಬಣ್ಣವನ್ನೇ ಪೇಂಟ್ ಮಾಡಿಕೊಂಡಿದ್ರೆ, ನಿವೇದಿತಾ ಅದೇ ಬಣ್ಣದ ವೆಲ್ವೆಟ್ ಕಲರ್ ಸ್ಕರ್ಟ್ ಧರಿಸಿ, ಮಾದಕ ಹೆಜ್ಜೆ ಹಾಕಿದ್ದರು. ರೀಲ್ಸ್ ಅಪ್‌ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ ಸಿಕ್ಕಾಪಟ್ಟೆ ವೀವ್ಸ್ ಕೂಡ ಪಡೆದುಕೊಂಡಿತ್ತು. ಸದ್ಯ ಇಬ್ಬರು ತಮ್ಮ ಅಕೌಂಟ್‌ನಿಂದ ಈ ರೀಲ್‌ನ್ನು ಡಿಲೀಟ್ ಮಾಡಿದ್ದಾರೆ.



























