ಪುತ್ತೂರು: ಕಬಕ ಹೊಟೇಲೊಂದರಲ್ಲಿ ನಾವು ಉಪಹಾರ ಸೇವಿಸುವಾಗ ಹೊಟೇಲ್ ಬಂದ್ ಮಾಡುವಂತೆ ಬಂದ ಪೊಲೀಸರೊಂದಿಗೆ ವಾಗ್ವಾದ ಮಾಡಿಲ್ಲ. ವಿನಯ ಪೂರ್ವಕವಾಗಿ ಕಾನೂನಿನಲ್ಲಿ ಅವಕಾಶದ ಕುರಿತು ಕೇಳಿದ್ದೇವೆ ಹೊರತು ಕಾನೂನು ಉಲ್ಲಂಘಿಸಿಲ್ಲ ಎಂದು ಉಜ್ವಲ್ ಪ್ರಭು ಅವರು ಸ್ಪಷ್ಟನೆ ನೀಡಿದ್ದಾರೆ.
ನಾವು ಗೆಳೆಯರೊಂದಿಗೆ ಹೊಟೇಲ್ ಗೆ ಹೋದದ್ದು ಹೌದು. ಅಲ್ಲಿ ಉಪಹಾರ ಸೇವಿಸುತ್ತಿದ್ದ ವೇಳೆ ಹೊಟೇಲ್ ಬಂದು ಮಾಡಿ ಎಂದು ಹೇಳಿದ್ದರು. ಈ ಕುರಿತು ನಾವು ಪೊಲೀಸರಲ್ಲಿ ಬಡವರಿಗೊಂದು ನ್ಯಾಯವಾ, ಶ್ರೀಮಂತರಿಗೊಂದು ನ್ಯಾಯವಾ ಎಂದು ಪೊಲೀಸರಲ್ಲಿ ವಿನಯಪೂರ್ವಕವಾಗಿ ಕೇಳಿ ಈ ತರ ಮಾಡುವಲ್ಲಿ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕೇಳಿದ್ದೇವೆ ಹೊರತು ಕಾನೂನು ಉಲ್ಲಂಘಿಸಿಲ್ಲ ಎಂದು ಉಜ್ವಲ್ ಪ್ರಭು ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಏಳಿಗೆ ಸಹಿಸದ ರಾಜಕೀಯ ದುರೀಣರ ಕೆಲಸ: ನನ್ನ ಉದ್ಯಮದ ಏಳಿಗೆ ಸಹಿಸಲಾರದ ರಾಜಕೀಯ ದುರೀಣರು ಅವಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ.ಹಲವು ದಿನಗಳಿಂದ ತೇಜೋವಧೆ ಮಾಡುವ ಕೆಲ್ಸ ನಡಿತಿದೆ ನಾವು ಕಾನೂನಿನ ಮೇಲೆ ನಂಬಿಕೆ ಇಟ್ಟವರು ಅದಕ್ಕೆ ಗೌರವ ಕೊಡುವವರು ಈ ಕುರಿತು ಕಾನೂನು ಹೋರಾಟ ಮಾಡುತ್ತೇವೆ ಎಂದವರು ತಿಳಿಸಿದ್ದಾರೆ. ಇದರ ಜೊತೆಗೆ ಎರಡು ಸಾಮಾಜಿಕ ವೆಬ್ ಗಳು ಬ್ಲ್ಯಾಕ್ ಮೇಲ್ ಮಾಡುತ್ತಿದ್ದು, ನಮ್ಮ ವಿರುದ್ದ ಷಡ್ಯಂತ್ರ ಮಾಡುವ ವ್ಯಕ್ತಿಗಳಿಗೆ ಮಹಾಲಿಂಗೇಶ್ವರ ದೇವರು ಒಳ್ಳೆದು ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಉಜ್ವಲ್ ಪ್ರಭು ತಿಳಿಸಿದ್ದಾರೆ.



























