ಪುತ್ತೂರು:ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ರೋಗಿಯ ಪುತ್ರನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಡಿಂಬಾಳದ ಕೇವಳ ನಿವಾಸಿ ಗೋವರ್ಧನ ಗೌಡ ಆರೋಪಿ. ಗೋವರ್ಧನ ಅವರ ತಂದೆ ಶಾಂತರಾಮ ಗೌಡ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು ಜೂ.25ರಂದು ಶಾಂತರಾಮ ಗೌಡ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದು ಕರ್ತವ್ಯದಲ್ಲಿದ್ದ ಡಾ.ಯೋಗೀಶ್ ಕೆ ಅವರು ಗೋವರ್ಧನ ಗೌಡ ಅವರಿಗೆ ಸೂಚಿಸಿದರು.
ಈ ಸಂದರ್ಭ ಸುಮಾರು ಒಂದೂವರೆ ಗಂಟೆಗೂ ಹೆಚ್ಚಿನ ಕಾಲ ತನ್ನೊಂದಿಗೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾಗಿ ಆರೋಪಿಸಿ ಡಾ.ಯೋಗೀಶ್ ಅವರು ನೀಡಿದ ಗೆ ದೂರಿನಂತೆ ಪೊಲೀಸರು ಗೋವರ್ಧನ ಗೌಡ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.


























