ಪುತ್ತೂರಿನ ಮಹಿಳೆಯೊಬ್ಬರು 16.56 ಲಕ್ಷ ರೂ.ಮೌಲ್ಯದ 138 ಗ್ರಾಂ. ಚಿನ್ನಾಭರಣ ಕಳವುಗೊಂಡಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುತ್ತೂರು ತಾಲೂಕಿನ ಅರಿಯಡ್ಕ ನಿವಾಸಿ ಮಾಲತಿ(48ವ.)ಚಿನ್ನ ಕಳೆದುಕೊಂಡವರಾಗಿದ್ದಾರೆ. ಇವರು ಜೂ.27ರಂದು ಬೆಳಿಗ್ಗೆ 138 ಗ್ರಾಂ. ತೂಕದ 16.56 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ತನ್ನ ಬ್ಯಾಗಿನಲ್ಲಿರಿಸಿಕೊಂಡು ಮನೆಯಿಂದ ಹೊರಟು ಪುತ್ತೂರಿನ ಕ್ಲಿನಿಕ್‌ಗೆ ಬಂದವರು ಹಿಂತಿರುಗಿ ಬಸ್ ಮೂಲಕ ಮಧ್ಯಾಹ್ನ ಹೊತ್ತಿಗೆ ವಿಟ್ಲ ಖಾಸಗಿ ಬಸ್ ನಿಲ್ದಾಣಕ್ಕೆ ತಲುಪಿ, ಬಸ್ಸಿನಿಂದ ಇಳಿದಾಗ ಲಗೇಜ್ ಬ್ಯಾಗ್‌ನ ಜಿಪ್ ಓಪನ್ ಆಗಿದ್ದನ್ನು ನೋಡಿ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿದ್ದ ಚಿನ್ನಾಭರಣಗಳು ಕಳ್ಳತನವಾಗಿರುವುದು ತಿಳಿದುಬಂದಿದೆ.
ಈ ಬಗ್ಗೆ ಮಹಿಳೆ ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಅಕ್ರ 146/2026 ಕಲಂ: 303 (2) BNS 2023ಯಂತೆ ಪ್ರಕರಣ ದಾಖಲಾಗಿದೆ.



























