ಬಳ್ಳಾರಿ: ಪತಿಯ ಜೊತೆ ಉಗಾಂಡ ದೇಶದಲ್ಲಿ ನೆಲೆಸಿದ್ದ ಕರ್ನಾಟಕ ವಿಜಯನಗರ ಜಿಲ್ಲೆಯ ಕೊಟ್ಟೂರು ಮೂಲದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕನ್ನನಾಯಕನ ಹಟ್ಟಿಯ ಬಿಂದು (24) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಪತಿ ಚಂದ್ರಶೇಖರ್ ಜೊತೆ ಮೃತ ಬಿಂದು ಉಗಾಂಡ ದೇಶದಲ್ಲಿ ನೆಲೆಸಿದ್ರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಪಾರ್ಥಿವ ಶರೀರ ತರಲು ತರಳಬಾಳು ಮಠದ ಶ್ರೀಗಳು ಸಹಾಯಯಾಸ್ತ ಚಾಚಿದ್ದಾರೆ.
ವಿದೇಶಿ ರಾಯಭಾರಿಗಳನ್ನ ಸಂಪರ್ಕಿಸಿದ ತರಳಬಾಳು ಶ್ರೀಗಳು, ಪಾರ್ಥಿವ ಶರೀರ ತವರಿಗೆ ತರಿಸಲು ಮುಂದಾಗಿದ್ದಾರೆ. ಗುರುವಾರ ಬೆಳಗ್ಗೆ (ಜು.02) ಮೃತ ಬಿಂದು ಪಾರ್ಥಿವ ಶರೀರ ಬೆಂಗಳೂರಿಗೆ ಬರಲಿದೆ.


























