ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರೊಂದು ಗುಂಡಿಗೆ ಬಿದ್ದ ಘಟನೆ ಬೈಪಾಸ್ ರಸ್ತೆಯ ಪರ್ಲಡ್ಕ ಜಂಕ್ಷನ್ ಸಮೀಪ ನಡೆದಿದೆ.
ಮುಂಜಾನೆ ವೇಳೆಗೆ ಘಟನೆ ನಡೆದಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಗುಂಡಿಯ ಬಳಿಯ ಮರ ಗಿಡಗಳಿಗೆ ತಾಗಿ ಕಾರು ನಿಂತಿದ್ದು. ಕಾರಿಗೆ ಹಾನಿಯಾಗಿದೆ. ಕ್ರೇನ್ ಮೂಲಕ ಕಾರನ್ನು ಮೇಲಕ್ಕೆತ್ತಲಾಗುತ್ತಿದೆ.



























