ಪುತ್ತೂರು: ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸುವ ಉದ್ದೇಶದಿಂದ ಸುಳ್ಳು ಮಾಹಿತಿ ನೀಡಿ Form-7 ಅರ್ಜಿ ಸಲ್ಲಿಸಲಾಗಿದೆ ಎಂದು ಆರೋಪಿಸಿ ಪುತ್ತೂರು ತಾಲೂಕು BLA ಸಂತೋಷ್ ಭಂಡಾರಿ ಅವರು ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಗೂ ಸಹಾಯಕ ಕಮಿಷನರ್ ಗೆ ದೂರು ನೀಡಿದ್ದಾರೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 177ರ ಬೀಪಾತು, ಅಶ್ರಫ್ ಹಸೈನಾರ್ ಕೆ., ಎಂ. ಅಬ್ದುಲ್ ರಹಿಮಾನ್ ಹಾಗೂ ಸಂಶುದ್ದೀನ್ ಅವರ ಹೆಸರುಗಳನ್ನು ಅಳಿಸುವಂತೆ ಹರೀಶ್ ಬಿಜತ್ರೆ ಎಂಬವರು ಅರ್ಜಿ ಸಲ್ಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಂಬಂಧಪಟ್ಟ ನಾಲ್ವರು ತಮ್ಮ ವಿಳಾಸದಲ್ಲಿಯೇ ವಾಸಿಸುತ್ತಿದ್ದು, ಮತದಾರರಾಗಿ ಮುಂದುವರಿಯಲು ಅರ್ಹರಾಗಿದ್ದಾರೆ. ಆದರೂ ಅವರು ಸ್ಥಳಾಂತರಗೊಂಡಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಸಮಗ್ರ ತನಿಖೆ ನಡೆಸಿ, ಆರೋಪ ಸಾಬೀತಾದಲ್ಲಿ Representation of the People Act, 1950ರ ಕಲಂ 31 ಸೇರಿದಂತೆ ಅನ್ವಯವಾಗುವ ಕಾನೂನುಗಳಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.


























