ಪುತ್ತೂರು: ಪೆರುವಾಯಿ ಗ್ರಾಮದ ಬದಿಯಾರು ಎಂಬಲ್ಲಿರುವ ಮನೆಗಳಿಗೆ ಮತ್ತು ರಸ್ತೆ ಸೌಕರ್ಯವಿಲ್ಲದೆ ನೆನೆಗುದಿಗೆ ಬಿದ್ದಿರುವ ಉಮಾಮಹೇಶ್ವರ ಕೊಟ್ಟದಾರು ಗ್ರಾಮ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಹಾಗೂ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ಗ್ರಾಮಸ್ಥರಿಂದ ಸನ್ಮಾನ ನಡೆಯಿತು.
ಈ ಸಂದರ್ಭದಲ್ಲಿ ಸೋಮಪ್ಪ ಶೆಟ್ಟಿ ಸೇನೆರೆಪಾಲು, ಶ್ರೀಲತಾ ಆರ್.ರೈ, ರಂಜಿತ್ ಶೆಟ್ಟಿ, ಪ್ರಜ್ಞೆಶ್ ಬದಿಯಾರ್, ವಸಂತ ಶೆಟ್ಟಿ ಬದಿಯಾರ್, ಜಯರಾಮ ಆಳ್ವ ಬದಿಯಾರ್, ರಮೇಶ್ ಶೆಟ್ಟಿ ಬದಿಯಾರ್, ವಿಕಲ್ ಶೆಟ್ಟಿ ಬದಿಯಾರ್, ಯಶೋಧರ ತಟ್ಟಿ ಬದಿಯಾರ್, ಬಾಳಪ್ಪ ಶೆಟ್ಟಿ ಬದಿಯಾರ್, ಗೀತಾ ವಿಕಲ ಶೆಟ್ಟಿ ಬದಿಯಾರ್, ಪದ್ಮಾವತಿ ವಸಂತ ಶೆಟ್ಟಿ ಬದಿಯಾರ್, ಪುಷ್ಪಾ ತಿಮ್ಮಪ್ಪ ಶೆಟ್ಟಿ ಬದಿಯಾರ್, ಜಯರಾಮ ಶೆಟ್ಟಿ ಬಿ. ಬದಿಯಾರ್, ಗುರುರಾಜ್ ಶೆಟ್ಟಿ, ರತನ್ ರಾಜ್ ಶೆಟ್ಟಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.




























