ಕೊಕ್ಕಡ: ಕುಂದಾಪುರ ತಾಲೂಕಿನ ತ್ರಾಸಿ ಎಂಬಲ್ಲಿ ಜು.23 ರಂದು ನಡೆದ ರಸ್ತೆ ಅಪಘಾತದಲ್ಲಿ ಕೊಕ್ಕಡ ಗ್ರಾಮದ ಹಳ್ಳಿಂಗೇರಿ ನಿವಾಸಿ ಸದಾನಂದ ಕಿಣಿ (27.ವ) ರವರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ವೆಲ್ಡರ್ ವೃತ್ತಿ ನಡೆಸುತ್ತಿದ್ದ ಸದಾನಂದ ಕಿಣಿಯವರು ತಮ್ಮ ಸಹೋದರ ಲಾರಿ ಚಾಲಕ ಕೃಷ್ಣಾನಂದ ಕಿಣಿಯವರೊಂದಿಗೆ ಕಾರ್ಯ ನಿಮಿತ್ತ ಕುಂದಾಪುರಕ್ಕೆ ತೆರಳಿದ್ದರು. ಕುಂದಾಪುರದ ತ್ರಾಸಿ ಎಂಬಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸದಾನಂದ ರವರಿಗೆ ಗಂಭೀರ ಗಾಯಗಳಾಗಿತ್ತು.ಕೂಡಲೇ ಇವರನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಮೃತರು ತಾಯಿ ಕಸ್ತೂರಿ ಕಿಣಿ, ಸಹೋದರರಾದ ನಿತ್ಯಾನಂದ ಕಿಣಿ, ಕೃಷ್ಣಾನಂದ ಕಿಣಿ, ಸಹೋದರಿ ಜಯಲಕ್ಷ್ಮೀ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ. ಉಪ್ಪಿನಂಗಡಿ ರುದ್ರಭೂಮಿಯಲ್ಲಿ ಮೃತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು