ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸಿಟಿಯ ನೇತೃತ್ವದಲ್ಲಿ ರೋಟರಿ ಹಮ್ಮಿಕೊಂಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ವಿವಿಧ ಸಮಾಜ ಸೇವಾ ಯೋಜನೆಗಳ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ನೀಡಿ ಇತರರಿಗೆ ಪ್ರೇರಣೆ ನೀಡುವ ‘ರೋಟರಿ ಪಬ್ಲಿಕ್ ಇಮೇಜ್ ಜಾಥಾ’ ಜು.24ರಂದು ನಡೆಯಿತು.
ದರ್ಬೆ ವೃತ್ತದ ಬಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು ರೋಟರಿ ಪಬ್ಲಿಕ್ ಇಮೇಜ್ ಜಾಥಾ ನೂತನ ವಾಹನವನ್ನು ಉದ್ಘಾಟಿಸಿದರು. ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ರವೀಂದ್ರ ಭಟ್ ಜಾಥಾಗೆ ಚಾಲನೆ ನೀಡಿದರು. ದರ್ಬೆ ವೃತ್ತದ ಬಳಿಯಿಂದ ಹೊರಟ ಜಾಥಾವು ಮುಖ್ಯ ರಸ್ತೆಯ ಮೂಲಕ ಸಾಗಿ ಮಂಜಲ್ಪಡ್ಪು ಬೈಪಾಸ್ ಬಳಿ ಸಮಾಪನಗೊಂಡಿತು.

ನಗರ ಸಭಾ ಪೌರಾಯುಕ್ತ ಮಧು ಎಸ್ ಮನೋಹರ್, ರೋಟರಿ ಕ್ಲಬ್ ಜಿಲ್ಲಾಸಹಾಯಕ ಗವರ್ನರ್ ಸುರೇಂದ್ರ ಕಿಣಿ, ಜಿಲ್ಲಾ ಕಾರ್ಯದರ್ಶಿ ರತ್ನರಾಜ್ , ಪಬ್ಲಿಕ್ ಇಮೇಜ್ ನ ಚೆಯರ್ ಮೆನ್ ಸತೀಶ್ ಬೋಳಾರ್, ನಿಯೋಜಿತ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ಜಿಲ್ಲಾ ಕಾರ್ಯದರ್ಶಿ ವಿವೇಕ್, ಮಾಜಿ ಗವರ್ನರ್ ಚಂಗಪ್ಪ, ಡಾ.ಸೂರ್ಯನಾರಾಯಣ, ಡಾ.ಕೇಶವ ಸೇರಿದಂತೆ ಎಲ್ಲಾ ರೋಟರಿ ಕ್ಲಬ್ ಗಳ ಜಿಲ್ಲಾ ಗವರ್ನರ್ ಗಳು, ಮತ್ತು ಎಲ್ಲಾ ಕ್ಲಬ್ ಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

