ಪುತ್ತೂರು: ವಿಶ್ವ ಹಿಂದು ಪರಿಷತ್,ಭಜರಂಗದಳ ಕಾವು ಘಟಕ ಹಾಗೂ ಪೇರಿಗೇರಿ, ಭಂಡಾರತ್ತಡ್ಕ ಘಟಕ ಮತ್ತು ಈಶ್ವರಮಂಗಳ ಘಟಕ ಇವುಗಳ ಸಹಯೋಗದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ ಕಾವು ಶ್ರೀಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಆ.13 ರಂದು ಸಂಜೆ ನಡೆಯಿತು.
ದಿಕ್ಸೂಚಿ ಭಾಷಣ ಮಾಡಿದ ಬಜರಂಗದಳ ಪ್ರಾಂತ ಸಂಯೋಜಕರು,ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಸಂಸ್ಕೃತಿ,ಸಂಸ್ಕಾರ,ಪರಂಪರೆ ಹೊಂದಿರುವ ದೇವಿ ಸ್ವರೂಪವಾದ ,ಅತ್ಯಂತ ಪ್ರಾವೀತ್ತ್ಯತೆಯಿಂದ ಕೂಡಿದ ಭಾರತ ದೇಶವನ್ನು ವಿಶ್ವ ಗುರುವನ್ನಾಗಿಸಲು ನಾವೆಲ್ಲರೂ ಪ್ರಯತ್ನಿಸಬೇಕು, ಹಿಂದೂ ಧರ್ಮ, ಸಂಸ್ಕತಿ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ, ಯುವ ಜನತೆ ಸುಭದ್ರ ರಾಷ್ಟ್ರ ಕಟ್ಟಲು ಪಣತೊಡಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಕಾವು ಘಟಕದ ಅಧ್ಯಕ್ಷ ಹಾಗೂ ಕಾವು ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಭಾಸ್ಕರ ಬಲ್ಯಾಯ ದೇಶದ ಹಲವಾರು ಹೋರಾಟಗಾರರ ಫಲವಾಗಿ ಭಾರತ ಸ್ವಾತಂತ್ರ್ಯ ಸಿಕ್ಕಿದ್ದು,ದೇಶದ ಪರಂಪರೆ ನೈಜ ಇತಿಹಾಸ ವನ್ನು ಯುವವಜನತೆ ಗೆ ತಲುಪಿಸಬೇಕಾಗಿದೆ.ವಿದ್ಯಾರ್ಥಿಗಳಿಗೆ ಕೇವಲ ದಾಳಿಕೋರರ ಬಗ್ಗೆ ಮಾತ್ರ ತಿಳಿಸುವ ಶಿಕ್ಷಣ ನೀಡಲಾಗುತ್ತಿದೆ, ಅದರೆ ನೈಜ ಹೋರಾಟಗಾರರ,ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರ ಬಗೆಗಿನ ಇತಿಹಾಸದ ಶಿಕ್ಷಣ ವಿದ್ಯಾರ್ಥಿಗಳಿಗೆ ಸಿಗುವಂತಾಗಬೇಕು ಎಂದು ಹೇಳಿದರು.
.
ಅಧ್ಯಕ್ಷತೆ ವಹಿಸಿದ್ದ ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡ ಮಾತನಾಡಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ಕೊರತೆಯಿದ್ದು ಕಾವು ದೇವಾಲಯದ ವ್ಯವಸ್ಥಾಪನಾ ಸಮಿತಿಯ ನೇತ್ರತ್ವದಲ್ಲಿ ಸಣ್ಣ ಮಕ್ಕಳಿಗೆ ಹಿಂದೂ ಧರ್ಮ ಜಾಗ್ರತಿಗೋಸ್ಕರ ಧರ್ಮದ ಸಂಸ್ಕೃತಿ, ಸಂಸ್ಕಾರ, ಹಾಗೂ ಹಿಂದೂ ಧರ್ಮದ ಪರಂಪರೆಯ ಶಿಕ್ಷಣವನ್ನು ನೀಡುವ ಬಗ್ಗೆ ಊರಿನ ಹಿರಿಯರು ಹಾಗೂ ಪ್ರಮುಖರ ಜೊತೆ ಚರ್ಚಿಸಿ ಧಾರ್ಮಿಕ ಶಿಕ್ಷಣದ ಕಾರ್ಯಕ್ರಮ ಹಮ್ಮಿಕೊಳ್ಳಲೂ ಉದ್ದೇಶಿಸಿದ್ದು ಎಲ್ಲರ ಸಹಕಾರ ಅಗತ್ಯ ಎಂದರು.

ವೇದಿಕೆಯಲ್ಲಿ ತಾಲೂಕು ಸೇವಾ ಪ್ರಮುಖ್ ಭರತ್ ತ್ಯಾಗರಾಜನಗರ, ವಿಶ್ವ ಹಿಂದು ಪರಿಷತ್ ತಾಲೂಕು ಕಾರ್ಯದರ್ಶಿ ವಿಶಾಖ್, ವಿ.ಹಿಂದು ಪರಿಷತ್ ಈಶ್ವರ ಮಂಗಲ ಘಟಕದ ಅಧ್ಯಕ್ಷ ದಿವಾಕರ ರೈ,. ಭಂಡಾರತ್ತಡ್ಕ ಘಟಕ ಅಧ್ಯಕ್ಷ ಶುಭ ಶಂಕರ್, ಕಾವು ಘಟಕದ ಹಿರಿಯ ಕಾರ್ಯಕರ್ತರಾದ ಗಣಪಯ್ಯ ಗೌಡ ಮಂಜಲ್ತಡ್ಕ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಭಾಸ್ಕರ ಬಲ್ಯಾಯ ಸ್ವಾಗತಿಸಿ, ಭರತ್ ತ್ಯಾಗರಾಜನಗರ ವಂದಿಸಿದರು, ಕಾವು ಘಟಕದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಮಾಣಿಯಡ್ಕ ಕಾರ್ಯಕ್ರಮ ನಿರ್ವಹಿಸಿದರು.