ಪುತ್ತೂರು: ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ದೇವಸ್ಥಾನ ವಠಾರದಲ್ಲಿ ನಡೆಯಲಿರುವ 56ನೇ ವರ್ಷದ ಗಣೇಶೋತ್ಸವದ ಗಣೇಶ ವಿಗ್ರಹ ರಚನೆಗೆ ಆ.25 ರಂದು ಮುಹೂರ್ತವನ್ನು ನೆರವೇರಿಸಲಾಯಿತು.

55 ವರ್ಷಗಳಿಂದ ವಿಜೃಂಭಣೆಯಿಂದ ಗಣೇಶೋತ್ಸವ ನಡೆಸಿಕೊಂಡು ಬರುತ್ತಿದ್ದು, ದೇವರ ಅನುಗ್ರಹದಿಂದ ಇಷ್ಟು ವರ್ಷಗಳ ಕಾಲ ಎಲ್ಲ ಚಂದವಾಗಿ ನಡೆದಿದೆ. ಎರಡು ವರ್ಷಗಳಿಂದ ಕೊರೊನಾದಿಂದಾಗಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ಸಾಧ್ಯವಾಗಿಲ್ಲ ಆದರೇ ಭಕ್ತಿ ಪೂರ್ವಕವಾಗಿ ಕಳೆದ ವರ್ಷ ಕೂಡ ನಾವು ಆಚರಿಸಿದ್ದೇವೆ. ಈ ವರ್ಷವೂ ಕೂಡ ಗಣೇಶೋತ್ಸವನ್ನು ಆಚರಿಸಬೇಕೆಂದಿದ್ದೇವೆ. ಇದರ ಪ್ರಥಮ ಕಾರ್ಯವಾಗಿ ವಿಗ್ರಹ ರಚನೆಗೆ ಮುಹೂರ್ತ ಮಾಡಿದ್ದೇವೆ. ವಿಗ್ರಹವೂ ಚಂದದ ರೀತಿಯಲ್ಲಿ ಮೂಡಿ ಬಂದು ಎಲ್ಲರಿಗೂ ಆಕರ್ಷಿತವಾಗಿ, ಎಲ್ಲಾ ಜನರಿಗೇ ಉತ್ತರೋತ್ತರ ಅಭಿವೃದ್ಧಿವಾಗುವ ಹಾಗೇ, ದೇಶ ಅಭಿವೃದ್ಧಿಯಾಗುವ ಹಾಗೇ ಆಶೀರ್ವದಿಸಬೇಕು ಎಂದು ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಡಾ. ಎಂ.ಕೆ. ಪ್ರಸಾದ್ ಭಂಡಾರಿ ಯವರು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ, ಅಧ್ಯಕ್ಷ ಶಶಾಂಕ್ ಕೋಟೆಚಾ ,ಉಪಾಧ್ಯಕ್ಷ ವಿಶ್ವನಾಥ್ ಗೌಡ, ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ,ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಜೊತೆ ಕಾರ್ಯದರ್ಶಿ ನೀಲಂತ,, ಕೋಶಾಧಿಕಾರಿ ಶ್ರೀನಿವಾಸ್, ಸದಸ್ಯರಾದ ದಯಾನಂದ್, ಉದಯ, ಗಿರೀಶ್, ನವೀನ್ ಪಂಜಳ, ಸುಜೀಂದ್ರ ಪ್ರಭು, ವಿಗ್ರಹ ರಚನೆಕಾರ ಶ್ರೀನಿವಾಸ್ ಪ್ರಭು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
