ಪುತ್ತೂರು: ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಯವರ ಶಿಫಾರಸ್ಸಿನಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್ ಟಿ ಘಟಕದ ಅಧ್ಯಕ್ಷರಾಗಿ ಮಹಾಲಿಂಗ ನಾಯ್ಕ್ ನೆರಿಮೊಗರು ರವರನ್ನು ನೇಮಕಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಅಬಕಾರಿ ನಿರೀಕ್ಷಕರಾಗಿ ಸರಕಾರಿ ಸೇವೆಯಿಂದ ನಿವೃತ್ತರಾಗಿರುವ ಮಹಾಲಿಂಗ ನಾಯ್ಕ್ ರವರು ಪುತ್ತೂರು ಮರಾಟಿ ಸಂಘ ಕೊಂಬೆಟ್ಟು ಇದರ ಪ್ರದಾನ ಕಾರ್ಯದರ್ಶಿಯಾಗಿ ಬಳಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ, ನರಿಮೊಗರು ಮರಾಠಿ ಸಮಾಜ ಸೇವಾ ಸಂಘವನ್ನು ಸ್ಥಾಪನೆ ಮಾಡಿ ಸುಮಾರು 10 ವರ್ಷಗಳ ಕಾಲ ಅಧ್ಯಕ್ಷರಾಗಿ ನರಿಮೊಗರಿನಲ್ಲಿ ನಿವೇಶನ ಪಡೆದುಕೊಂಡು, ಮರಾಠಿ ಸಮಾಜ ಮಂದಿರ ನಿರ್ಮಾಣಕ್ಕೆ ಕಾರಣಕರ್ತರಾಗಿರುತ್ತಾರೆ.

ಜೆಸಿಐ ನೆರಿಮೊಗರು ಇದರ ಅಧ್ಯಕ್ಷರಾಗಿ ಉತ್ತಮ ಸಮಾಜಮುಖಿ ಕಾರ್ಯಗಳಿಗಾಗಿ ಜೆಸಿಐ ವಲಯ ಅಧ್ಯಕ್ಷರಿಂದ ಸೂಪರ್ ಸ್ಟಾರ್ ಅವಾರ್ಡ್ ಹಾಗೂ ಜೆಸಿಐ ರಾಷ್ಟ್ರೀಯ ಅಧ್ಯಕ್ಷರಿಂದ ರಾಷ್ಟ್ರೀಯ ಪುರಸ್ಕಾರ ಪಡಕೊಂಡಿರುತ್ತಾರೆ,
ನೆರಿಮೊಗರು ಮೃತ್ಯುಂಜೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಹಾಗೂ ಬ್ರಹ್ಮಕಶೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಇವರು ಪುತ್ತೂರು ಸರಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿ ಪುತ್ತೂರು ಸರಕಾರಿ ನೌಕರರ ನೂತನ ಭವನ ನಿರ್ಮಾಣಕ್ಕೆ ಶ್ರಮವಹಿಸಿದವರಾಗಿದ್ದಾರೆ.