ಬಂಟ್ವಾಳ: ತಾಲೂಕು ಬಿಳಿಯೂರು ಗ್ರಾಮದ ಪುರಿಯಾ ನಿವಾಸಿ ಗಿರೀಶ್(30) ತೋಟದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೆ.20 ರಂದು ನಡೆದಿದೆ.

ಇವರು ಈ ಮೊದಲು ಪುತ್ತೂರಿನ ಪ್ರತಿಷ್ಠಿತ ಬಾರ್ & ರೆಸ್ಟೋರೆಂಟ್ ನಲ್ಲಿ ಬಿಲ್ಲಿಂಗ್ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ಆದಿತ್ಯವಾರವಾದ ಕಾರಣ ಸ್ಥಳೀಯ ಗ್ರೌಂಡ್ ನಲ್ಲಿ ಯುವಕರ ಜೊತೆ ಸೇರಿ ಕ್ರಿಕೆಟ್ ಆಡಿದ್ದರು ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತನಿಖೆ ನಂತರ ತಿಳಿದು ಬರಬೇಕಿದೆ.
ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.