ಕಲ್ಲಡ್ಕ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುದ್ರೆಬೆಟ್ಟು ಇದರ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ರಮೇಶ್ ಕುದ್ರಬೆಟ್ಟು, ಶಾಲಾ ಮುಖ್ಯ ಶಿಕ್ಷಕರಾದ ಚೇತನಾ, ಗ್ರಾಮ ಪಂಚಾಯತ್ ಸದಸ್ಯರಾದ ಲತೇಶ್ ಕೂರ್ಮಾನ್, ವಿದ್ಯಾರ್ಥಿ ಸಂಘದ ಅಧ್ಯಕ್ಷರು ಸುನಿಲ್ ಕುಮಾರ್ ಉಪಸ್ಥಿತಿಯಲ್ಲಿ ಕುದ್ರೆಬೆಟ್ಟು ಶಾಲೆಯಲ್ಲಿ ಜರುಗಿತು.
ಮುಂದಿನ ಎರಡು ವರ್ಷದ ಅವಧಿಗೆ (2021-2023 )ನೂತನ ಅಧ್ಯಕ್ಷರಾಗಿ ಶಿವರಾಜ್ ಕುಮಾರ್ ಕುದ್ರೆಬೆಟ್ಟು, ಉಪಾಧ್ಯಕ್ಷರಾಗಿ ಮಾಧವ ದಾಸಕೊಡಿ ,ಸನತ್ ಕುಮಾರ್ ,ಶ್ರೀಮತಿ ಜಯಂತಿ, ಕಾರ್ಯದರ್ಶಿಯಾಗಿ ನೀತು ಅಮೀನ್ ಮಿತ್ತಬೈಲು,ಜೊತೆ ಕಾರ್ಯದರ್ಶಿಯಾಗಿ ಹೇಮಂತ್ ಕುಮಾರ್ ಬೋಲ್ಪೋಡಿ, ಸಂಘಟನಾ ಕಾರ್ಯದರ್ಶಿಗಳಾಗಿ ಪ್ರಶಾಂತ್ ಕುಮಾರ್, ಪ್ರಜ್ವಲ್ ಮಿತ್ತಬೈಲು ,ದೀಕ್ಷಿತ್ ಗೌಡ ಬೋಲ್ಪೋಡಿ , ಸಾಂಸ್ಕೃತಿಕಕಾರ್ಯದರ್ಶಿ ಸಂತೋಷ್ ಕುಮಾರ್ ಬೋಲ್ಪೋಡಿ, ಗೌರವ ಸಲಹೆಗಾರರು ಸುಂದರ ಪಾಧೆ , ಭೋಜರಾಜ್, ಪುರಂದರ ದಾಸ ಕೊಡಿ ಆಯ್ಕೆಯಾದರು
. ಈ ಸಂದರ್ಭದಲ್ಲಿ ಶಾಲಾ ಸಹಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
