ಸುಳ್ಯ: ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ನಡೆದಿದೆ.
ಸುಳ್ಯದ ಕಲ್ಲುಗುಂಡಿಯ ಕಾರ್ಮಿಕ ಮುಖಂಡ ಕೆ.ಪಿ.ಜಾನಿ ಎಂಬವರ ಐದೂವರೆ ವರ್ಷದ ಜೆಮೀನಾ ಕೆ.ಜಾನ್ ಅತ್ಯಾಪರೂಪದ ಖಾಯಿಲೆಗೆ ತುತ್ತಾಗಿ ಮೃತಪಟ್ಟ ನತದೃಷ್ಟ ಬಾಲಕಿ.
ಈಕೆ ಹಿಮೋಫಾಗೊಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್ (HLH), ಎಪ್ಸ್ಟೀನ್ ಬಾರ್ ವೈರಸ್ [Hemophagocytic Lymphohistiocytosis (HLH), Epstein Barr Virus (EBV)] ಎಂಬ ವಿಚಿತ್ರ ರೋಗದಿಂದ ಬಳಲುತ್ತಿದ್ದಳು. ಅ 14 ರಂದು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾಳೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಸುಮಾರು 50,00,000 ರೂ. ಚಿಕಿತ್ಸೆಗೆ ಬೇಕಾಗಿತ್ತು. ಆದರೆ, ಹಣಕಾಸಿನ ವ್ಯವಸ್ಥೆ ನಡೆಸಿದ್ದರೂ ಮಗುವನ್ನು ಉಳಿಸಲು ಸಾಧ್ಯವಾಗಿಲ್ಲ.