ಪುತ್ತೂರು: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಕಾಂಗ್ರೆಸ್ ನ ಎಸ್.ಟಿ ಘಟಕದ ವತಿಯಿಂದ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು.
ಮಾಜಿ ಶಾಸಕರಾದ ಶಕುಂತಲಾ ಟಿ ಶೆಟ್ಟಿಯವರು ದೀಪ ಬೆಳಗಿಸಿ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಶುಭ ಹಾರೈಸಿದರು. ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎಂ.ಬಿ. ವಿಶ್ವನಾಥ ರೈ ಅಧ್ಯಕ್ಷತೆ ವಹಿಸಿದ್ದರು.
ಕಾಡಲ್ಲಿ ಪ್ರಾಣಿಗಳನ್ನು ಬೇಟೆಯಾಡುತ್ತಾ ಜೀವನ ಸವೆಸುತ್ತಿದ್ದ ಬೇಡ ರತ್ನಾಕರನು ನಾರದ ಮಹರ್ಷಿಗಳ ದರ್ಶನದಿಂದ ಮನಪರಿವರ್ತನೆಗೊಂಡು ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳ ಮಹಾಕಾವ್ಯ ರಾಮಾಯಣವನ್ನು ಬರೆದು ವಾಲ್ಮೀಕಿ ಮಹರ್ಷಿಯಾಗುತ್ತಾರೆ. ವಾಲ್ಮೀಕಿ ಮಹರ್ಷಿ ಬರೆದ ಮಹಾಕಾವ್ಯ ರಾಮಾಯಣದಲ್ಲಿ ಬರುವ ಶ್ರೀರಾಮಚಂದ್ರನು ಪಿತೃ ವಾಕ್ಯಪರಿಪಾಲಕನಾಗಿ, ಏಕಪತ್ನೀವೃತಸ್ಥನಾಗಿ ಪ್ರಜಾಹಿತ ಚಿಂತಕನಾಗಿ ನಮಗೆಲ್ಲಾ ಆದರ್ಶಪ್ರಾಯನಾಗಿದ್ದಾನೆ. ಸೀತಾದೇವಿ ಪತಿವ್ರತೆಯಾಗಿ ನಮಗೆ ಕಾಣುತ್ತಾಳೆ. ಲಕ್ಷ್ಮಣ ಸಹೋದರತೆಗೆ ಆದರ್ಶಪ್ರಾಯನಾದರೆ, ರಾಮನ ಬಂಟ ಹನುಮಂತ ಸ್ವಾಮಿ ನಿಷ್ಠೆಗೆ ಹೆಸರುವಾಸಿಯಾಗುತ್ತಾನೆ. ರಾಮ ಮತ್ತು ರಾಮಾಯಣ ನಮಗೆಲ್ಲಾ ಶ್ರದ್ಧೆ, ಭಕ್ತಿ, ನಂಬಿಕೆಯ ವಿಷಯವಾದರೆ, ಬಿಜೆಪಿಗರಿಗೆ ಅಧಿಕಾರಕ್ಕೇರಲು ಇದೊಂದು ರಾಜಕೀಯ ವಸ್ತುವಾಗಿದೆ ಶ್ರೀರಾಮನ ಹೆಸರೇಳಿ ಅಧಿಕಾರಕ್ಕೆ ಬಂದ ಕೆಲ ಬಿಜೆಪಿಗರು ಶ್ರೀರಾಮನ ಆದರ್ಶಗಳನ್ನು ಗಾಳಿಗೆ ತೂರಿ ತಮ್ಮ ಅಶ್ಲೀಲ ನೀಲಿ ಚಿತ್ರಗಳು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳದಂತೆ ನ್ಯಾಯಾಲಯದಿಂದ ನಿರ್ಬಂಧಕಾಜ್ಞೆ ತಂದಿದ್ದಾರೆ.
ಹೆಚ್ಚಿನವರು ಅನಾಚಾರ, ಅನೈತಿಕ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿರುತ್ತಾರೆ ಶ್ರೀರಾಮನನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವವರು ಮುಂದೆ ಹುಟ್ಟಿ ಬಂದಾರು ಎಂಬ ಕೆಟ್ಟ ಯೊಚನೆ ಅಂದು ವಾಲ್ಮೀಕಿ ಮಹರ್ಷಿಗಳ ಮನಸ್ಸಿಗೆ ಬರಲಿಲ್ಲ. ಆ ಯೋಚನೆ ಬರುತ್ತಿದ್ದರೆ ಖಂಡಿತವಾಗಿ ಅವರು ಮಹಾಕಾವ್ಯ ರಾಮಾಯಣವನ್ನು ಬರೆಯುತ್ತಿರಲಿಲ್ಲ. ನಾವೆಲ್ಲ ಬಿಜೆಪಿಗರಂತಿರದೆ ಶ್ರೀರಾಮಚಂದ್ರನ ಆದರ್ಶಗಳನ್ನು ಸಾಧ್ಯವಾದಷ್ಟು ಮೈಗೂಡಿಸಿ ಕೊಳ್ಳುವುದರ ಮೂಲಕ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಆಶಯದಲ್ಲಿ ಕಾಂಗ್ರೆಸ್ ನ ಎಸ್ ಟಿ ಘಟಕದ ವತಿಯಿಂದ ಹಮ್ಮಿಕೊಳ್ಳಲಾದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಚಿಂತಕ ನ್ಯಾಯವಾದಿ ಕೆ.ಭಾಸ್ಕರ ಕೋಡಿಂಬಾಳ ನುಡಿದರು.
ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್ ನ ಅಧ್ಯಕ್ಷರಾದ ಎಚ್ ಮಹಮ್ಮದ್ ಆಲಿ, ಮಹಿಳಾ ಘಟಕದ ಅಧ್ಯಕ್ಷರಾದ ಶಾರದಾ ಅರಸ್, ಪುತ್ತೂರು ಕಾರ್ಮಿಕ ಘಟಕದ ಅಧ್ಯಕ್ಷರಾದ ಶರೋನ್ ಸಿಕ್ವೇರಾ, ಎಸ್.ಸಿ. ಘಟಕದ ಅಧ್ಯಕ್ಷರಾದ ಕೇಶವ ಪಡೀಲ್, ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ ಎಚ್ ಎ ಶಕೂರ್ ಹಾಜಿ,ಮಾಜಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಸಹರ ಭಾನು, ಪಂಚಾಯತ್ ರಾಜ್ ಸಂಘಟಣೆಯ ಚಿಲ್ಮೆತ್ತಾರು ಸಂತೋಷ್ ಭಂಡಾರಿ,ಬ್ಲಾಕ್ ಕಾರ್ಯದರ್ಶಿ ಸಿರಿಲ್ ರೋಡ್ರಿ ಗಸ್, ಮನಮೋಹನ್ ರೈ,ರೋಷನ್ ರೈ ಬನ್ನೂರು,ಡಿ ಕೆ ಅಬ್ದುಲ್ ರಹಿಮಾನ್,ಕೆ ಎ ಆಲಿ ಆರ್ಲಪದವು, ಬ್ಲಾಕ್ ಕೋಶಾಧಿಕಾರಿ ವಲೇರಿಯನ್ ಡಯಾಸ್.
ಬ್ಲಾಕ್ ಮಹಿಳಾ ಕಾಂಗ್ರೆಸ್ ಪ್ರದಾನ ಕಾರ್ಯ ದರ್ಶಿ ಸೀತಾ ಉದಯ ಶಂಕರ ಭಟ್ ಆರ್ಲ ಪದವು, ಅರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಜ್ವಲ್ ರೈ ತೊಟ್ಲ, ತಾರನಾಥ ನಿಡ್ಪಳ್ಳಿ, ಪ್ರತೀಕ ಪೂರ್ಣೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ನ ಎಸ್.ಟಿ. ಘಟಕದ ಅಧ್ಯಕ್ಷರಾದ ಮಹಾಲಿಂಗ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನೂ ಸ್ವಾಗತಿಸಿ, ವಂದಿಸಿದರು. ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.