ಪುತ್ತೂರು: ಮದರಸ ವಿದ್ಯಾರ್ಥಿಯೊಬ್ಬ ಕೆಸರು ತುಂಬಿದ ಕೆರೆ ನೀರಿಗೆ ಬಿದ್ದು, ಅಸ್ವಸ್ಥಗೊಂಡ ಘಟನೆ ಪುತ್ತೂರು ತಾಲೂಕಿನ ಮಾಡನ್ನೂರಿನಲ್ಲಿ ಅ.27 ರಂದು ಸಂಜೆ ನಡೆದಿದೆ.
ವಿದ್ಯಾರ್ಥಿಗಳು ಕೊಳದ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಕೆಸರು ತುಂಬಿದ ನೀರಿಗೆ ಬಿದ್ದಿದ್ದು, ನೀರಿಗೆ ಬಿದ್ದ ಬಾಲಕ ಸುಮಾರು ಹೊತ್ತಿನವರೆಗೆ ಹೊರಬರಲಾರದೆ ಕೆಸರು ನೀರಿನಲ್ಲಿ ಬಾಕಿಯಾಗಿದ್ದ ಎನ್ನಲಾಗಿದೆ.
ಗಂಭೀರ ಗಾಯಗೊಂಡ ವಿದ್ಯಾರ್ಥಿಯನ್ನು ಪುತ್ತೂರಿನ ಆಸ್ಪತ್ರೆಗೆ ಕರೆತಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.