ಪುತ್ತೂರು: ದರ್ಬೆ ಪಾಂಗ್ಲಾಯಿ ರೋಶನ್ ಪಿಂಟೋ ರವರ ಪತ್ನಿ ಜೋಸ್ನ ಲೋಬೋ( 36ವ.)ರವರು
ಡೆಂಗ್ಯೂ ಜ್ವರದಿಂದಾಗಿ ನ.9 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಜೋಸ್ನ ಲೋಬೋ ರವರ ಪತಿ ರೋಶನ್ ಪಿಂಟೋ ರವರು ಹಲವಾರು ವರ್ಷಗಳಿಂದ ಪೂಮಾ ಇಂಟರ್ ನ್ಯಾಷನಲ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು, ಬೆಂಗಳೂರಿನ ಇಂದಿರಾ ನಗರ ಎಚ್.ಎ.ಎಲ್ ಲೇಔಟ್ ನಲ್ಲಿ ವಾಸವಾಗಿದ್ದರು.
ಮೃತರು ತಂದೆ ಜೇಮ್ಸ್, ಪತಿ ರೋಶನ್, ಪುತ್ರಿ ರೇಚಲ್, ಪುತ್ರ ಮೂರುವರೆ ವರ್ಷದ ರಿಯೋನ್,ಸಹೋದರಿ ಜ್ಯೋತಿ, ಪತಿ ರೋಶನ್ ರವರ ಸಹೋದರರಾದ ರೊನಾಲ್ಡ್, ರಿಚರ್ಡ್, ರುಡೋಲ್ಫ್, ರೋಯ್ಸ್ ರವರನ್ನು ಅಗಲಿದ್ದಾರೆ.