ಮಾಣಿ: ಸೂರಿಕುಮೇರು ಜಂಕ್ಷನ್ ನಲ್ಲಿ ಗ್ಯಾಸ್ ಟ್ಯಾಂಕರ್ ಲಾರಿ ಪಲ್ಟಿ.(2/2/2121)ಬೆಳಗಿನ ಜಾವ ಸುಮಾರು 4ಗಂಟೆಗೆ ನಡೆದ ಘಟನೆ.ಗ್ಯಾಸ್ ತುಂಬಿದ ಗ್ಯಾಸ್ ಟ್ಯಾಂಕರ್ ಹೈವೇ ಗೆ ಸಂಪೂರ್ಣವಾಗಿ ಅಡ್ಡ ಮಗುಚಿ ಬಿದ್ದಿದೆ. ಪರಿಸರದಲ್ಲಿ ಯಾವುದೇ ಬೆಂಕಿಯ ಬಳಕೆ ಮಾಡಬಾರದು ಎಂದು ಸಾರ್ವಜನಿಕ ವಾಗಿ ಮಸೀದಿಯ ಧ್ವನಿ ವರ್ಧಕ ಮೂಲಕ ತಿಳಿಸಲಾಗಿದೆ.

ಪರಿಸರದ ಸಾರ್ವಜನಿಕರು ತಕ್ಷಣ ಎಚ್ಚೆತ್ತು ವಾಹನಗಳನ್ನು ಸೂಕ್ತ ಕ್ರಮಗಳನ್ನು ಕೈಗೊಂಡರು. ವಿಟ್ಲ ಪೋಲೀಸ್ ಠಾಣೆಯ ಪೋಲಿಸರು ಸ್ಥಳಕ್ಕೆ ಆಗಮಿಸಿದರು.ಯಾವುದೇ ಗ್ಯಾಸ್ ಸೋರಿಕೆ ಆಗದ ಕಾರಣ ದೊಡ್ಡ ದುರಂತವೊಂದು ತಪ್ಪಿದೆ.ಎಂದು ತಿಳಿದುಬಂದಿದೆ.




























