ಪುತ್ತೂರು: ನಗರ ಪೊಲೀಸ್ ಠಾಣೆ ಸೇರಿದಂತೆ ಹಲವಾರು ಕಡೆ ಕರ್ತವ್ಯ ನಿರ್ವಹಿಸಿದ್ದ, ಬಲ್ನಾಡು ಕರ್ಕುಂಜ ನಿವಾಸಿ ನಿವೃತ್ತ ಎ.ಎಸ್.ಐ ರಾಮಕೃಷ್ಣ (70ವ) ರವರು ನ.15ರ ರಾತ್ರಿ ನಿಧನರಾದರು.
ಇತ್ತೀಚಿಗೆ ಅನಾರೋಗ್ಯಕ್ಕೆ ಒಳಗಾಗಿದ್ದ ರಾಮಕೃಷ್ಣ ರವರಿಗೆ ನ.15 ರಂದು ಆರೋಗ್ಯದಲ್ಲಿ ತೀವ್ರ ಏರುಪೇರಾದ ಹಿನ್ನಲೆಯಲ್ಲಿ ತಡರಾತ್ರಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಆಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಭಾರತಿದೇವಿ, ಪುತ್ರ ಹರ್ಷಿತ್ ರನ್ನು ಅಗಲಿದ್ದಾರೆ.