ಬೆಟ್ಟಂಪಾಡಿ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಡಿ.16 ರಂದು ಪುತ್ತೂರು-ಪಾಣಾಜೆ ರಸ್ತೆಯ ಚೆಲ್ಯಡ್ಕ ಎಂಬಲ್ಲಿ ನಡೆದಿದೆ.
ಬೆಟ್ಟಂಪಾಡಿ ಬಳಿಯ ಡೆಮ್ಮಂಗಾರದಿಂದ ಪುತ್ತೂರು ಕಡೆಗೆ ಹೊರಟಿದ್ದ ಆಲ್ಟೋ-800 ಕಾರು ಉಪ್ಪಳಿಗೆ ಸಮೀಪದ ಚೆಲ್ಯಡ್ಕ ಎಂಬಲ್ಲಿ ರಸ್ತೆಯ ಬದಿಯ ತೋಟಕ್ಕೆ ಉರುಳಿ ಬಿದ್ದಿದೆ.
ಉಪ್ಪಳಿಗೆಯ ಚೆಲ್ಯಡ್ಕ ತಿರುವಿನ ಬಳಿ ಚಾಲಕನ ಹತೋಟಿ ಕಳಕೊಂಡು ಅವಘಡ ಸಂಭವಿಸಿದ್ದು, ಕಾರಿನಲ್ಲಿ ಮಗು ಸಹಿತ ಐವರು ಪ್ರಯಾಣಿಸುತ್ತಿದ್ದು, ಕಾರು ಕಂದಕಕ್ಕೆ ಉರುಳಿ ಬಿದ್ದ ವೇಳೆ ಪಲ್ಟಿಯಾಗಿದ್ದರೂ ಕಾರಿನಲ್ಲಿದ್ದ ಐವರು ಪವಾಡ ಸದೃಶ್ಯವಾಗಿ ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.