ಬಂಟ್ವಾಳ: ಅಕ್ರಮ ಕಟ್ಟಿಗೆ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಬಂಟ್ವಾಳ ಅರಣ್ಯ ಇಲಾಖಾ ಅಧಿಕಾರಿಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ ಘಟನೆ ಬಿಸಿರೋಡಿನಲ್ಲಿ ನಡೆದಿದೆ.
ಬಿಸಿರೋಡು ಸರ್ಕಲ್ ಬಳಿ ಬುಧವಾರ ರಾತ್ರಿ ಖಚಿತ ಮಾಹಿತಿ ಮೇಲೆ ಕಾರ್ಯಚರಣೆ ನಡೆಸಿದ ಅರಣ್ಯ ಅಧಿಕಾರಿಗಳು ಲಾರಿ ಸಹಿತ ಐದು ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದು ಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಟ್ವಾಳ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ವೇಳೆ ವಶಕ್ಕೆ ಪಡೆಯಲಾಗಿದೆ.
ಡಿ.ಎಪ್ ಒ ಡಾ. ದಿನೇಶ್ ಕುಮಾರ್ ಹಾಗೂ ಎಸಿಎಪ್ ಸುಬ್ರಮಣ್ಯ ರಾವ್ ಅವರ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಉಪವಲಯ ಅರಣ್ಯಾಧಿಕಾರಿ ಪ್ರೀತಂ, ಅರಣ್ಯ ರಕ್ಷಕರಾದ ದಯಾನಂದ, ರವಿಕುಮಾರ್, ಅನಿತಾ, ಲಕ್ಮೀನಾರಾಯಣ, ಅರಣ್ಯ ವೀಕ್ಷಕ ಜಯರಾಮ್, ವಾಹನ ಜಯಚಾಲಕ ಜಯರಾಮ್ ಕಾರ್ಯಚರಣೆ ಯಲ್ಲಿ ಪಾಲ್ಗೊಂಡಿದ್ದರು.