ಬಂಟ್ವಾಳ: ತೆಂಗಿನಮರ ಕಡಿಯುವ ವೇಳೆ ಮರ ಬಿದ್ದು ಯುವಕನೋರ್ವನ ಸ್ಥಳದಲ್ಲೇ ಮೃತಪಟ್ಟ ಘಟನೆ ಶಂಭೂರು ಗ್ರಾಮದ ನಾಯಿಲದಲ್ಲಿ ನಡೆದಿದೆ.
ಮೃತ ಯುವಕನನ್ನು ನಾಯಿಲ ಬೆಟ್ಟುಗದ್ದೆ ನಿವಾಸಿ ದಿ.ಪೂವಪ್ಪ ಪೂಜಾರಿ ಅವರ ಪುತ್ರ ಯತಿರಾಜ್(37) ಎನ್ನಲಾಗಿದೆ.
ಯತಿರಾಜ್ ಮರ ಕಡಿಯುವ ಕೆಲಸದ ಗುತ್ತಿಗೆ ವಹಿಸುತ್ತಿದ್ದು, ಸ್ಥಳೀಯ ಕೃಷಿಕರೋರ್ವರ ತೋಟದಲ್ಲಿ ತೆಂಗಿನಮರ ಕಡಿಯುವ ವೇಳೆ ಘಟನೆ ನಡೆದಿದೆ.
ತಕ್ಷಣ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುಲಾಯಿತ್ತಾದರೂ ಆದಾಗಲೇ ಮೃತಪಟ್ಟಿದ್ದರು. ಯತಿರಾಜ್ ಗೆ ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು.