ಬಂಟ್ವಾಳ: ನಂದಾವರ ಹೊಳೆಗೆ ಜಿಗಿದು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಜಿಪಮುನ್ನೂರು ಗ್ರಾಮದ ಮಡಿವಾಳಪಡ್ಪು ನಿವಾಸಿ ದೇವಪ್ಪ ಮಡಿವಾಳ (60) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಶನಿವಾರ ಬೆಳಗ್ಗೆ ಪಾಣೆಮಂಗಳೂರು ಸಮೀಪದ ನಂದಾವರ ಸೇತುವೆಯಿಂದ ಹೊಳೆಗೆ ಜಿಗಿದು ಆತ್ಮ,ಹತ್ಯೆಗೆ ಶರಣಾಗಿದ್ದಾರೆ. ಪ್ರಗತಿಪರ ಕೃಷಿಕರಾಗಿರುವ ದೇವಪ್ಪ ಮಡಿವಾಳ ರವರು ಕೆಲ ಸಮಯಗಳಿಂದ ವಿಪರೀತ ತಲೆನೋವಿನಿಂದ ಬಳಲುತ್ತಿದ್ದರೆನ್ನಲಾಗಿದೆ. ಇದೇ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾದರೆಂಬ ಅನುಮಾನ ವ್ಯಕ್ತವಾಗಿದೆ.
ಶನಿವಾರ ಬೆಳಿಗ್ಗೆ ತನ್ನ ಮನೆಯಿಂದ ಪಾಣೆಮಂಗಳೂರಿಗೆ ಬಂದಿದ್ದ ಅವರು ಅಲ್ಲಿಂದ ಆಟೋ ಮೂಲಕ ನಂದಾವರದ ಕಡೆಗೆ ತೆರಳಿದ್ದರೆನ್ನಲಾಗಿದೆ. ಶ್ರೀ ಶಾರದಾ ಪ್ರೌಢಶಾಲೆ ಬಳಿಯ ನಂದಾವರ ಸೇತುವೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ಗೂಡಿನ ಬಳಿಯ ಜೀವರಕ್ಷಕ ಈಜು ತಂಡದ ಮಹಮ್ಮದ್ ಮಮ್ಮು ನೇತೃತ್ವದ ತಂಡ ಮೃತದೇಹ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದ್ದು, ಬಂಟ್ವಾಳ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಹತ್ತು ದಿನಗಳಲ್ಲಿ ಬಂಟ್ವಾಳ ತಾಲೂಕಿನ ನದಿಗಳಲ್ಲಿ ದೊರೆತ ಮೂರನೇ ಮೃತದೇಹ ಇದಾಗಿದ್ದು ಜ 19ರಂದು ಜಲೀಲ್ ಕಾರಾಜೆ ಪಾಣೆಮಂಗಳೂರು ಹೊಸ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿದ್ದರು, ಜ 27 ರಂದು ಗೂಡಿನಬಳಿ ನೇತ್ರಾವತಿ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದ ದ ಬೆನ್ನಲ್ಲೇ ಇದೀಗ ನಂದಾವರ ಸೇತುವೆಯಿಂದ ಹಾರಿ ದೇವಪ್ಪ ಮಡಿವಾಳ ಸಾವಿಗೆ ಶರಣಾಗಿದ್ದಾರೆ.