ಬೆಂಗಳೂರು: ಆರೋಪಿ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾದ ನಂತರ ನಿರೀಕ್ಷಣಾ ಜಾಮೀನು ಸಲ್ಲಿಕೆಗೆ ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಆರೋಪಿಯು ಒಮ್ಮೆ ಕೋರ್ಟ್ ಮುಂದೆ ಹಾಜರಾದರೆ, ಬಳಿಕ ಆತ ಅಪರಾಧ ದಂಡ ಸಂಹಿತೆ ಸೆಕ್ಷನ್ 438 ರ ಅನ್ವಯ ನಿರೀಕ್ಷಣಾ ಜಾಮೀನು ಸಲ್ಲಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಆರೋಪಿಯು ಒಮ್ಮೆ ವಿಚಾರಣಾ ಕೋರ್ಟ್ ಮುಂದೆ ಖುದ್ದಾಗಿ ಅಥವಾ ವಕೀಲರ ಮುಖಾಂತರ ಹಾಜರಾಗಿ, ನಂತರದ ದಿನಗಳಲ್ಲಿ ವಿಚಾರಣೆಗೆ ಗೈರಾದ ಕಾರಣಕ್ಕೆ ವಾರೆಂಟ್ ಜಾರಿಯಾದರೆ ನಿರೀಕ್ಷಣಾ
ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲವೆಂದು ಹೈಕೋರ್ಟ್ ಆದೇಶಿಸಿದೆ.