ವಿಟ್ಲ: ಠಾಣಾ ವ್ಯಾಪ್ತಿಯ ಕೊಳ್ಳಾಡು ಗ್ರಾಮ ಸಾಲೆತ್ತೂರಿನ ಹಝಿಜ್ ಎಂಬವರ ಮಗಳ ಮದುವೆ ಸಮಾರಂಭದಲ್ಲಿ ವಧುವಿನ ಮನೆಗೆ ಕೇರಳ ರಾಜ್ಯದ ಉಪ್ಪಳದ ಸೋಂಕಳು ನಿವಾಸಿಯಾದ ವರ ಉಮರುಳ್ಳ ಬಾಷಿತ್ ಎಂಬಾತ ಹಿಂದೂಗಳ ಆರಾಧ್ಯ ದೈವ ಕೊರಗಜ್ಜನ ವೇಷ ಧರಿಸಿ ಮತ್ತು ಆತನ ಸಂಗಡಿಗರು ಅಸಭ್ಯವಾಗಿ ಕುಣಿದು ಕುಪ್ಪಳಿಸುತ್ತಾ ಬಂದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಲ್ಲದೇ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಅದರ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ದುಷ್ಕತ್ಯ ಮೆರೆದಿದ್ದು, ಇದರಿಂದ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆಯಾದ ಬಗ್ಗೆ ಖಂಡಿಸಿ ಆರೋಪಿಗಳನ್ನು ಬಂಧಿಸುವಂತೆ ಹಿಂದೂ ಸಂಘಟನೆಗಳು ಒತ್ತಾಯಿಸಿದ್ದು, ಈ ಬಗ್ಗೆ ಠಾಣೆಯಲ್ಲಿ ದೂರು ನೀಡಲಾಗಿತ್ತು.
ಠಾಣೆಯಲ್ಲಿ ಅಕ್ರ 04/2022 ಕಲಂ 153(ಎ) , 295(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿತ್ತು.
ತನಿಖೆ ಮುಂದುವರೆಸಿದ ಪೊಲೀಸರು ಎರಡು ತಂಡಗಳಾಗಿ ಕಾರ್ಯಾಚರಣೆ ನಡೆಸಿ ಜ.10 ರಂದು ಕೇರಳದ ಅಹಮ್ಮದ್ ಮುಜಿತಬ ಯಾನೆ ಮುಜಿ ಮತ್ತು ಮೊಹಿಯುದ್ದಿನ್ ಮುನೀಸ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಪ್ರಕರಣದ ಪ್ರಮುಖ ಆರೋಪಿ ಉಮರುಲ್ ಬಾಸಿತ್ ನ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು, ಆತ ಕೇರಳ ರಾಜ್ಯದ ಎರ್ನಾಕುಲಂ ಎಂಬಲ್ಲಿಂದ ಹೊರ ದೇಶಕ್ಕೆ ಪಲಾಯಣ ಮಾಡಿ ತಲೆಮರೆಸಿಕೊಳ್ಳುವ ಬಗ್ಗೆ ತಿಳಿದುಕೊಂಡು ಕೇರಳ ರಾಜ್ಯದ ಕೊಚ್ಚಿನ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನೆಡುಂಬಸೆರಿ ಎರ್ನಾಕುಲಂ ಜಿಲ್ಲೆ ಬಳಿ ಆತನನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಋಷಿಕೇಶ್ ಸೋನವಣೆ ಐಪಿಎಸ್ ಎಸ್.ಪಿ ದ.ಕ ಜಿಲ್ಲೆ ಮತ್ತು ಪ್ರತಾಪ್ ಸಿಂಗ್ ಥೊರಟ್ ಡಿವೈಎಸ್ ಪಿ ಬಂಟ್ವಾಳ ಉಪವಿಭಾಗರವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕರು ನಾಗರಾಜ್ ಹೆಚ್ ಇ ನೇತೃತ್ವದಲ್ಲಿ , ಸಂದೀಪ್ ಕುಮಾರ್ ಶೆಟ್ಟಿ ಪಿಎಸ್ ಐ (ಕಾಮಸು), ಸಂಜೀವ ಪುರುಷ ಪಿಎಸ್ ಐ, ಜಯಕುಮಾರ್, ದಿನೇಶ್, ರಕ್ಷಿತ್, ಪ್ರಸನ್ನ ಕುಮಾರ್, ಪಿಸಿ 2487 ಹೇಮರಾಜ್ ರವರು ಈ ಪಾಲ್ಗೊಂಡಿದ್ದರು.