Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಈಶ್ವರಮಂಗಲದಲ್ಲಿ ಪಿಕ್‌ಅಪ್‌ – ಬೈಕ್ ಅಪಘಾತ: ಗಂಭೀರ ಗಾಯಗೊಂಡಿದ್ದ ಸುಳ್ಯದ ಯುವಕ ಮೃತ್ಯು..!

    ಈಶ್ವರಮಂಗಲದಲ್ಲಿ ಪಿಕ್‌ಅಪ್‌ – ಬೈಕ್ ಅಪಘಾತ: ಗಂಭೀರ ಗಾಯಗೊಂಡಿದ್ದ ಸುಳ್ಯದ ಯುವಕ ಮೃತ್ಯು..!

    ವಿಟ್ಲ: ವಾಸುದೇವ ಆಚಾರ್ಯ ನೆತ್ತರ ಕೆರೆ ನಿಧನ..!!

    ವಿಟ್ಲ: ವಾಸುದೇವ ಆಚಾರ್ಯ ನೆತ್ತರ ಕೆರೆ ನಿಧನ..!!

    ಎಸ್‌ಐಆ‌ರ್ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಫಾರಂ-7 ಸಲ್ಲಿಕೆ ಇಬ್ಬರು ಬಿಎಲ್‌ಎ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ : ಅರ್ಜಿದಾರರ ಪರ ಹಿರಿಯ ವಕೀಲ ಡಾ|ಅರುಣ್‌ಶ್ಯಾಂ ಪುತ್ತೂರು ವಾದ..!

    ಎಸ್‌ಐಆ‌ರ್ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಫಾರಂ-7 ಸಲ್ಲಿಕೆ ಇಬ್ಬರು ಬಿಎಲ್‌ಎ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ : ಅರ್ಜಿದಾರರ ಪರ ಹಿರಿಯ ವಕೀಲ ಡಾ|ಅರುಣ್‌ಶ್ಯಾಂ ಪುತ್ತೂರು ವಾದ..!

    ಕೊಚ್ಚಿಯಲ್ಲಿ ಕಾರು-ಸ್ಕೂಟಿ ಅಪಘಾತ: ಸುಳ್ಯದ ಯುವಕ ಸಾವು..!

    ಕೊಚ್ಚಿಯಲ್ಲಿ ಕಾರು-ಸ್ಕೂಟಿ ಅಪಘಾತ: ಸುಳ್ಯದ ಯುವಕ ಸಾವು..!

    ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆಯ ಬಾಲಕಿಯರು ಕಬಡ್ಡಿಯಲ್ಲಿ ಸತತ 4ನೇ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ..!

    ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆಯ ಬಾಲಕಿಯರು ಕಬಡ್ಡಿಯಲ್ಲಿ ಸತತ 4ನೇ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ..!

    ಪುತ್ತೂರು : ಹಳೆ ಕಟ್ಟಡಕ್ಕೆ ಬೆಂಕಿ: ತಪ್ಪಿದ ಅನಾಹುತ..!!

    ಪುತ್ತೂರು : ಹಳೆ ಕಟ್ಟಡಕ್ಕೆ ಬೆಂಕಿ: ತಪ್ಪಿದ ಅನಾಹುತ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಧಾರ್ಮಿಕ

ಮುಕ್ರಂಪಾಡಿ: ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಸುವರ್ಣ ಸಂಭ್ರಮದ ಅಂಗವಾಗಿ ‘ಅರ್ಧಏಕಾಹ ಭಜನೆ, ಧಾರ್ಮಿಕ ಸಭೆ’

February 7, 2022
in ಧಾರ್ಮಿಕ, ಪುತ್ತೂರು
0
ಮುಕ್ರಂಪಾಡಿ: ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಸುವರ್ಣ ಸಂಭ್ರಮದ ಅಂಗವಾಗಿ ‘ಅರ್ಧಏಕಾಹ ಭಜನೆ, ಧಾರ್ಮಿಕ ಸಭೆ’
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು: ಮುಕ್ರಂಪಾಡಿಯ ಸುಭದ್ರ ಸಭಾ ಮಂದಿರದ ಬಳಿಯ ಅಶ್ವತ್ಥಕಟ್ಟೆಯಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಸುವರ್ಣ ಸಂಭ್ರಮದ ಅಂಗವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಾಣ ಪೂಜೆ, ಅರ್ಧಏಕಾಹ ಭಜನೆ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆ ಫೆ.5,6 ರಂದು ನಡೆಯಿತು.

Advertisement
Advertisement

ಭಗವಂತ ಪ್ರಾಪ್ತಿದಾಯಕ ನಮಗೆಂದು ಕಷ್ಟವನ್ನು‌ ಕರುಣಿಸುವುದಿಲ್ಲ. ಪ್ರಕೃತಿಯ ನಿಯಮದಲ್ಲಿ ಯಾವುದೇ ಜಾತಿ,‌ಧರ್ಮ ಬೇಧವಿಲ್ಲ. ನಾವು ಜಾತಿ ಕಟ್ಟಪಾಡುಗಳಿಂದ ಹೊರಬಂದು ನೀತಿ ಕಟ್ಟುಪಾಡುಗಳನ್ನು ಅಳವಡಿಸಿಕೊಂಡಾಗ ದೇಶವು ಸಮೃದ್ಧವಾಗಲು ಸಾಧ್ಯ ಎಂದು ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ‌ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮಿಜಿಯವರು ಹೇಳಿದರು.

Advertisement
Advertisement

ಮುಕ್ರಂಪಾಡಿಯ ಸುಭದ್ರ ಸಭಾ ಮಂದಿರದ ಬಳಿಯ ಅಶ್ವತ್ಥಕಟ್ಟೆಯಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಸುವರ್ಣ ಸಂಭ್ರಮದ ಸಾರ್ವಜನಿಕ ಶ್ರೀ ಸತ್ಯನಾರಾಯಾಣ ಪೂಜೆಯ ಎರಡನೇ ದಿನವಾದ ಫೆ.6 ರಂದು ಅರ್ಧಏಕಾಹ ಭಜನೆ, ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳ ಧಾರ್ಮಿಕ ಸಭೆಯಲ್ಲಿ‌ ಅವರು ಆಶೀರ್ಚನ ನೀಡಿದರು.

Advertisement

ಯಾವುದೇ ರೀತಿಯ ಪೂಜೆ ಆರಾಧನೆಗಳ ಮಹತ್ವ ತಿಳಿದು ಸಲ್ಲಿಸುವ ಸೇವೆ ಪ್ರಾಪ್ತಿಯಾಗಲಿದೆ. ಹೀಗಾಗಿ ಅವುಗಳ ಮಹತ್ವ ತಿಳಿದುಕೊಳ್ಳಬೇಕಾದ ಆವಶ್ಯಕತೆಯಿದೆ. ಆರಾಧನೆಯ ಮಹತ್ವ ನಮ್ಮ‌ಮನಸ್ಸಿನಲ್ಲಿ ಅಂತರ್ಗತವಾಗಿರಬೇಕು. ದೇವತಾನುಗ್ರಹ ಪಡೆಯುವ ಮನಸ್ಥಿತಿ ನಮ್ಮಲ್ಲಿರಬೇಕು. ಪ್ರೀತಿ, ಬಾಂಧವ್ಯಗಳು ಸಮಾಜದಲ್ಲಿ ಶಾಶ್ವತವಾಗಿದ್ದು ನಾವು ಪರಸ್ಪರ ಪ್ರೀತಿಯ ಬಾಂಧವ್ಯ, ಐಕ್ಯಮತ್ಯದ ಭಾವನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಪ್ಯ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಸಮಾಜ ಬಹಳಷ್ಟು ಮುಂದುವರಿದಿದೆ. ಆದರೂ ಕೆಲವೊಂದು ಬುದ್ದಿ ಜೀವಿಗಳು ಮಾತ್ರ ನಮ್ಮನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಅದಕ್ಕೆ‌ ಕಿವಿ ಕೊಡದೆ ನಾವು ಸನಾತನವಾದ ಹಿಂದು ಧರ್ಮವನ್ನು ಉಳಿಸುವ ಕಾರ್ಯವಾಗಬೇಕು ಇದಕ್ಕಾಗಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವ ಕಾರ್ಯ ಮನೆಯಿಂದ ಪ್ರಾರಂಭವಾಗಬೇಕು ಎಂದರು.

ಮುಖ್ಯ ಅತಿಥಿಗಳಾದ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ವಿವಿಧ ಜಾತಿ ಪಂಗಡಗಳಿದ್ದರೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಗ್ಗಟ್ಟಿನಿಂದ ಪಾಲ್ಗೊಳ್ಳಬೇಕು. ಭಕ್ತಿಯಿಂದ ಸಲ್ಲಿಸುವ ಸೇವೆಗೆ ಸತ್ಯನಾರಾಯಣ ಸ್ವಾಮಿ ಶೀಘ್ರ ಪ್ರಾಪ್ತಿಯಾಗುತ್ತದೆ ಎಂದರು.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಸುವರ್ಣ ಸಂಭ್ರಮದ ಸತ್ಯನಾರಾಯಣ ಪೂಜೆಯು ದೇವಸ್ಥಾನದ ಬ್ರಹ್ಮಕಲಶೋತ್ಸವ ರೀತಿಯಲ್ಲಿ ಕಾರ್ಯಕ್ರಮ ನಡೆದಿರುತ್ತದೆ. ಉತ್ತಮ ಉದ್ದೇಶದಿಂದ ನಮ್ಮ ಹಿರಿಯರು ಪೂಜಾ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ಅದನ್ನು ಮುಂದುವರಿಸುವ ಹೊಣೆ ನಮ್ಮ ಮೇಲಿದೆ ಎಂದರು.

ವೇದಿಕೆಯಲ್ಲಿ ಪೂಜಾ ಸಮಿತಿ ಅಧ್ಯಕ್ಷ ಸೋಮಶೇಖರ ರೈ, ಗೌರವಾಧ್ಯಕ್ಷ ಗಿರೀಶ್ ಪಿ.ಎಸ್., ಉಪಸ್ಥಿತರಿದ್ದರು.

ಸುವರ್ಣ ಸಂಭ್ರಮದ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಮಾರ್ತ , ಉದಯ ಕುಮಾರ್ ರೈ ಎಸ್ ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಕಾರ್ಯದರ್ಶಿ ಸಂತೋಷ್ ಕೆ. ಮುಕ್ರಂಪಾಡಿ, ರವೀಂದ್ರ ಸಂಪ್ಯ, ಗಣೇಶ್ ಕೆ.ಮುಕ್ರಂಪಾಡಿ, ಪದ್ಮನಾಭ, ಉಲ್ಲಾಸ್ ಮುಕ್ರಂಪಾಡಿ, ದಾಮೋದರ ಪಾಟಾಳಿ, ರಮೇಶ್ ರೈ ಮೊಟ್ಟೆತ್ತಡ್ಕ, ಶಿವಪ್ರಸಾದ್ ರವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಪೂಜಾ ಸಮಿತಿಯಿಂದ ವಸಂತ ಪಂಜಳ, ವಿಶ್ವನಾಥ ಪಂಜಳರವರಿಗೆ ತುಳಸಿಕಟ್ಟೆಯನ್ನು ವಿತರಿಸಲಾಯಿತು.

ಅರ್ಧ ಏಕಾಹ ಭಜನೆ:
ಸುವರ್ಣ ಸಂಭ್ರಮದ ಅಂಗವಾಗಿ ನಡೆದ ಅರ್ಧ ಏಕಾಹ ಭಜನೆಯು ೬.೫೭ಕ್ಕೆ ಉದ್ಘಾಟನೆಗೊಂಡಿತು. ನಗರ ಸಭಾ ಸದಸ್ಯೆ ಇಂದಿರಾ ಪುರುಷೋತ್ತಮ ದೀಪಬೆಳಗಿಸಿ ಉದ್ಘಾಟಿಸಿದರು. ನಗರ ಸಭಾ ಸದಸ್ಯೆ ಶಶಿಕಲಾ ಸಿ.ಎಸ್., ಸುವರ್ಣ ಸಂಭ್ರಮ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಸೋಮಶೇಖರ ರೈ, ಕಾರ್ಯದರ್ಶಿ ಸಂತೋಷ್ ಕೆ.ಮುಕ್ರಂಪಾಡಿ, ಉಪಾಧ್ಯಕ್ಷೆ ಪ್ರಮೀತಾ ಸಿ.ಹಾಸ್, ಕೋಶಾಧಿಕಾರಿ ಶ್ರೀಪಾದ ಮುಕ್ರಂಪಾಡಿ, ಗೌರವ ಸಲಹೆಗಾರರಾದ ಹರಿಣಿ ಪುತ್ತೂರಾಯ ಹಾಗೂ ದಾಮೋಧರ ಪಾಟಾಳಿ ಉಪಸ್ಥಿತರಿದ್ದರು.

ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಿತು. ಬೆಳಿಗ್ಗೆ ೭.೩೦ರಿಂದ ಸ್ವಸ್ತಿ ಪುಣ್ಯಾಹವಾಚನ, ದ್ವಾದಶ ನಾಳಿಕೇರ, ಮಹಾಗಣಪತಿ ಹವನ, ಸುಕೃತ ಹೋಮ, ಪುರಸ್ಸರ, ಶ್ರೀಲಕ್ಷ್ಮೀ ಸತ್ಯನಾರಾಯಣ ಉದ್ಯಾಪನಾ ಹೋಮ, ಶ್ರೀ ದೇವರಿಗೆ ಕಲ್ಪೋಕ್ತಪೂಜಾ ಸಹಿತ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಅರ್ಧಏಕಾಹ ಭಜನೆಯಲ್ಲಿ ಮುಕ್ರಂಪಾಡಿ ಸುಭದ್ರ ಮಹಿಳಾ ಭಜನಾ ಮಂಡಳಿ, ಬೊಳುವಾರು ವೈಷ್ಣವಿ ವೈದೇಹಿ ಭಜನಾ ಮಂಡಳಿ, ಕೆಮ್ಮಿಂಜೆ ಶ್ರೀರಾಮ ಭಜನಾ ಮಂಡಳಿ, ಮೊಟ್ಟೆತ್ತಡ್ಕ ಮಿಷನ್‌ಮೂಲೆ ಚಾಮುಂಡೇಶ್ವರಿ ಭಜನಾ ಮಂಡಳಿ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಬಲ್ನಾಡು ದುರ್ಗಾಶ್ರೀ ಭಜನಾ ಮಂಡಳಿ, ಗಾನಸಿರಿ ಕಲಾ ಕೇಂದ್ರ, ಬಂಗಾರಡ್ಕ ಶ್ರೀರಾಮ ಭಜನಾ ಮಂಡಳಿ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಪುತ್ತೂರು, ವಜ್ರಮಾತಾ ಮಹಿಳಾ ಭಜನಾ ಮಂಡಳಿ ಹಾಗೂ ಮಹಾವಿಷ್ಣು ಭಜನಾ ಮಂಡಳಿ ಪಾಲಿಂಜೆಯವರಿಂದ ಭಜನಾ ಕಾರ್ಯಕ್ರಮ ನೆರವೇರಿತು. ಸಂಜೆ ೬.೩೦ಕ್ಕೆ ಅರ್ಧ ಏಕಾಹ ಭಜನೆ ಮಂಗಳ ನಡೆಯಿತು.

ಶ್ರೀಮಾ, ಶ್ರೇಯಾ, ಶ್ರದ್ಧಾ ಪ್ರಾರ್ಥಿಸಿದರು. ಸುವರ್ಣ ಸಂಭ್ರಮ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಗೌರವ ಸಲಹೆಗಾರರಾದ ಉದಯಕುಮಾಯ ರೈ ಎಸ್. ಹಾಗೂ ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿದರು. ಸಮಿತಿ‌ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಮಾರ್ತ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಚೌಕಿ ಪೂಜೆ, ಅನ್ನಸಂರ್ತಣೆ, ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ನಡೆಯಿತು.

Previous Post

ಹಿಜಾಬ್ ವಿವಾದ: ಉಪ್ಪಿನಂಗಡಿಯಲ್ಲಿ ಮಹಿಳಾ ಹಕ್ಕುಗಳ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ..!!

Next Post

ಮಂಗಳೂರು: ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಘಟಕಕ್ಕೆ ಪೊಲೀಸ್ ದಾಳಿ : 1,92,000 ಮೌಲ್ಯದ ಸೊತ್ತು ವಶ

OtherNews

ಈಶ್ವರಮಂಗಲದಲ್ಲಿ ಪಿಕ್‌ಅಪ್‌ – ಬೈಕ್ ಅಪಘಾತ: ಗಂಭೀರ ಗಾಯಗೊಂಡಿದ್ದ ಸುಳ್ಯದ ಯುವಕ ಮೃತ್ಯು..!
Featured

ಈಶ್ವರಮಂಗಲದಲ್ಲಿ ಪಿಕ್‌ಅಪ್‌ – ಬೈಕ್ ಅಪಘಾತ: ಗಂಭೀರ ಗಾಯಗೊಂಡಿದ್ದ ಸುಳ್ಯದ ಯುವಕ ಮೃತ್ಯು..!

October 11, 2026
ವಿಟ್ಲ: ವಾಸುದೇವ ಆಚಾರ್ಯ ನೆತ್ತರ ಕೆರೆ ನಿಧನ..!!
ಕ್ರೈಮ್

ವಿಟ್ಲ: ವಾಸುದೇವ ಆಚಾರ್ಯ ನೆತ್ತರ ಕೆರೆ ನಿಧನ..!!

October 11, 2026
ಎಸ್‌ಐಆ‌ರ್ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಫಾರಂ-7 ಸಲ್ಲಿಕೆ ಇಬ್ಬರು ಬಿಎಲ್‌ಎ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ : ಅರ್ಜಿದಾರರ ಪರ ಹಿರಿಯ ವಕೀಲ ಡಾ|ಅರುಣ್‌ಶ್ಯಾಂ ಪುತ್ತೂರು ವಾದ..!
ಪುತ್ತೂರು

ಎಸ್‌ಐಆ‌ರ್ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಫಾರಂ-7 ಸಲ್ಲಿಕೆ ಇಬ್ಬರು ಬಿಎಲ್‌ಎ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ : ಅರ್ಜಿದಾರರ ಪರ ಹಿರಿಯ ವಕೀಲ ಡಾ|ಅರುಣ್‌ಶ್ಯಾಂ ಪುತ್ತೂರು ವಾದ..!

October 11, 2026
ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆಯ ಬಾಲಕಿಯರು ಕಬಡ್ಡಿಯಲ್ಲಿ ಸತತ 4ನೇ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ..!
ಕ್ರೀಡೆ

ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆಯ ಬಾಲಕಿಯರು ಕಬಡ್ಡಿಯಲ್ಲಿ ಸತತ 4ನೇ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ..!

October 11, 2026
ಪುತ್ತೂರು : ಹಳೆ ಕಟ್ಟಡಕ್ಕೆ ಬೆಂಕಿ: ತಪ್ಪಿದ ಅನಾಹುತ..!!
Featured

ಪುತ್ತೂರು : ಹಳೆ ಕಟ್ಟಡಕ್ಕೆ ಬೆಂಕಿ: ತಪ್ಪಿದ ಅನಾಹುತ..!!

October 11, 2026
ಇಷ್ಟಾರ್ಥ ಸಿದ್ಧಿಗಾಗಿ ಜಲದುರ್ಗೆಗೆ ಹರಿವಾಣ ಸೇವೆ : ಅಕ್ಕಿ ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರೆ ಅಭೀಷ್ಟ ಈಡೇರುವ ನಂಬಿಕೆ..!
ಧಾರ್ಮಿಕ

ಇಷ್ಟಾರ್ಥ ಸಿದ್ಧಿಗಾಗಿ ಜಲದುರ್ಗೆಗೆ ಹರಿವಾಣ ಸೇವೆ : ಅಕ್ಕಿ ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರೆ ಅಭೀಷ್ಟ ಈಡೇರುವ ನಂಬಿಕೆ..!

October 10, 2026

Leave a Reply Cancel reply

Your email address will not be published. Required fields are marked *

Recent News

ಈಶ್ವರಮಂಗಲದಲ್ಲಿ ಪಿಕ್‌ಅಪ್‌ – ಬೈಕ್ ಅಪಘಾತ: ಗಂಭೀರ ಗಾಯಗೊಂಡಿದ್ದ ಸುಳ್ಯದ ಯುವಕ ಮೃತ್ಯು..!

ಈಶ್ವರಮಂಗಲದಲ್ಲಿ ಪಿಕ್‌ಅಪ್‌ – ಬೈಕ್ ಅಪಘಾತ: ಗಂಭೀರ ಗಾಯಗೊಂಡಿದ್ದ ಸುಳ್ಯದ ಯುವಕ ಮೃತ್ಯು..!

October 11, 2026
ವಿಟ್ಲ: ವಾಸುದೇವ ಆಚಾರ್ಯ ನೆತ್ತರ ಕೆರೆ ನಿಧನ..!!

ವಿಟ್ಲ: ವಾಸುದೇವ ಆಚಾರ್ಯ ನೆತ್ತರ ಕೆರೆ ನಿಧನ..!!

October 11, 2026
ಎಸ್‌ಐಆ‌ರ್ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಫಾರಂ-7 ಸಲ್ಲಿಕೆ ಇಬ್ಬರು ಬಿಎಲ್‌ಎ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ : ಅರ್ಜಿದಾರರ ಪರ ಹಿರಿಯ ವಕೀಲ ಡಾ|ಅರುಣ್‌ಶ್ಯಾಂ ಪುತ್ತೂರು ವಾದ..!

ಎಸ್‌ಐಆ‌ರ್ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಫಾರಂ-7 ಸಲ್ಲಿಕೆ ಇಬ್ಬರು ಬಿಎಲ್‌ಎ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ : ಅರ್ಜಿದಾರರ ಪರ ಹಿರಿಯ ವಕೀಲ ಡಾ|ಅರುಣ್‌ಶ್ಯಾಂ ಪುತ್ತೂರು ವಾದ..!

October 11, 2026
ಮುಂಬೈ ಪ್ರೀಮಿಯರ್ನಲ್ಲಿ” ಬನ” ತುಳು ಚಿತ್ರಕ್ಕೆ ಪ್ರಶಂಸೆಯ ಸುರಿಮಳೆ..!

ಮುಂಬೈ ಪ್ರೀಮಿಯರ್ನಲ್ಲಿ” ಬನ” ತುಳು ಚಿತ್ರಕ್ಕೆ ಪ್ರಶಂಸೆಯ ಸುರಿಮಳೆ..!

October 11, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.