ಧರ್ಮಸ್ಥಳ: ಸ್ಥಳೀಯ ಯುವತಿಯೊರ್ವಳನ್ನು ಅನ್ಯಕೋಮಿನ ಯುವಕನೋರ್ವ ಮದುವೆಯಾಗುವ ನೆಪದಲ್ಲಿ ಕರೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಪಡೆದ ವಿಟ್ಲ ಹಿಂದೂ ಜಾಗರಣ ವೇದಿಕೆ ಹಾಗೂ ಧರ್ಮಸ್ಥಳ ಠಾಣಾ ಪೊಲೀಸರು ಸುಳ್ಯ ಸಮೀಪ ಜೋಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಧರ್ಮಸ್ಥಳ ಮೂಲದ ಯುವತಿಯು ಅನ್ಯಕೋಮಿನ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿರುವುದು ಈ ಮೊದಲೇ ಹಿಂಜಾವೇ ಮಾತೃ ಸುರಕ್ಷಾದ ಗಮನಕ್ಕೆ ಬಂದ ಕಾರಣ ಯುವತಿಯ ಮನವೊಲಿಸುವ ಪ್ರಯತ್ನ ನಡೆದಿತ್ತು.
ಆದರೆ ಇಂದು ಯುವತಿ ಯುವಕನೊಂದಿಗೆ ಮಡಿಕೇರಿ ಕಡೆಗೆ ಪ್ರಯಾಣ ಬೆಳೆಸುತ್ತಿರುವ ಮಾಹಿತಿ ಪಡೆದ ಹಿಂಜಾವೇ ಕಾರ್ಯಕರ್ತರು ಧರ್ಮಸ್ಥಳ ಪೊಲೀಸರ ಜೊತೆಗೂಡಿ ಜೋಡಿಯನ್ನು ಸುಳ್ಯ ಸಮೀಪ ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.