ಬಂಟ್ವಾಳ: ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಎಂಬಲ್ಲಿ ಅಕ್ರಮ ಮರಳುಗಾರಿಕಾ ಅಡ್ಡೆಗೆ ಗಣಿ ಇಲಾಖಾ ತಂಡ ದಾಳಿ ನಡೆಸಿ ಸ್ಥಳದಲ್ಲಿ ಮರಳುಗಾರಿಕೆಗೆ ಬಳಸುವ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಾಗಿದೆ.
ಸರಪಾಡಿ ಸಮೀಪದ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಎಂಬಲ್ಲಿ ಅಕ್ರಮವಾಗಿ ಬೋಟ್ ಬಳಕೆ ಮಾಡಿ ಮರಳುಗಾರಿಕೆ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಗಣಿ ಇಲಾಖಾ ಅಧಿಕಾರಿಗಳ ತಂಡ ದಾಳಿ ನಡೆಸಿದಾಗ ಸ್ಥಳದಲ್ಲಿ ಮರಳುಗಾರಿಕೆಗೆ ಬಳಸುವ ಸೊತ್ತುಗಳು ಕಂಡು ಬಂದಿದೆ.
ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮೂರು ಬೋಟ್ ಹಾಗೂ ಮರಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಕಂದಾಯ ನಿರೀಕ್ಷಕ ಚೆನ್ನಬಸಪ್ಪ, ಗಣಿ ಇಲಾಖೆಯ ಅಧಿಕಾರಿ ಮಹಾದೇಶ್ವರ, ಪಿ.ಡಿ.ಒ ವಿಜಯಲಕ್ಷ್ಮೀ ದೊಡ್ಡಪತ್ತಾರ್, ಗ್ರಾಮಾಂತರ ಎನ್ಐ ಹರೀಶ್ ಮತ್ತಿತ್ತರ ಅಧಿಕಾರಿಗಳು ಭಾಗವಹಿಸಿದ್ದರು.