ವಿಟ್ಲ: ಸಿಟಿ ಲಯನ್ಸ್ ಕ್ಲಬ್ ನ ಉಪಾಧ್ಯಕ್ಷರಾದ ಸದಾನಂದ ಗೌಡ ಸೇರಾಜೆ ರವರ ತಾಯಿ ವೀರಮ್ಮ ಎಸ್.(82) ರವರು ಅಸೌಖ್ಯದಿಂದಾಗಿ ಫೆ.16 ರಂದು ನಿಧನರಾದರು.
ಮೃತರು ಮೂರು ಗಂಡು ಮತ್ತು ಒಂದು ಹೆಣ್ಣು ಮಗಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಪ್ರಾಂತೀಯ ಸಲಹೆಗಾರ ಸುದರ್ಶನ್ ಪಡಿಯಾರ್, ಭಾಸ್ಕರ ರೈ, ಸುರೇಶ್ ಬನಾರಿ, ಗೈಡಿಂಗ್ ಲಯನ್ ಸತೀಶ್ ಕುಮಾರ್ ಆಳ್ವ ರವರು ಮೃತರ ಮನೆಗೆ ತೆರಳಿ ಸಂತಾಪ ಸೂಚಿಸಿದರು.
ಸಿಟಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಸಂದೇಶ್ ಶೆಟ್ಟಿ ಬಿಕ್ನಜೆ, ಪ್ರಾಂತೀಯ ಅಧ್ಯಕ್ಷ ಹೇಮನಾಥ ಶೆಟ್ಟಿ ಹಾಗೂ ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಸರ್ವ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.