ವಿಟ್ಲ: ಕೇಪು ಗ್ರಾಮ ಪಂಚಾಯತ್, ಜನಶಿಕ್ಷಣ ಟ್ರಸ್ಟ್ ಸಾಂತ್ವನ ಕೇಂದ್ರ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಂಜೀವಿನಿ ಒಕ್ಕೂಟ ಇವುಗಳ ಸಹಯೋಗದೊಂದಿಗೆ ಸಾಂತ್ವನ ಗ್ರಾಮ, ಮಹಿಳಾ ಜಾಗೃತಿ ಅಭಿಯಾನವು ಕೇಪು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರೀ ನೆಕ್ಕರೆ ಸೋಲಾರ್ ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಂಟ್ವಾಳ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಗೀತಾಶ್ರೀ ಕಾರ್ಯಕ್ರಮದ ಪ್ರಾಸ್ತವಿಕ ಮಾತುಗಳನ್ನಾಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷತೆಯಲ್ಲಿ ನಡೆದ ಅಭಿಯಾನದಲ್ಲಿ ಭಾಗವಹಿಸಿದ ಜಿಲ್ಲಾ ಪಂಚಾಯತ್ ನರೇಗಾ ಮಾಜಿ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಮಹಿಳಾ ಜಾಗೃತಿಯ ಬಗ್ಗೆ ಮಾಹಿತಿ ನೀಡಿದರು.
ಉದ್ಯೋಗ ಖಾತರಿ ಯೋಜನೆಯಲ್ಲಿ ಸುಸ್ಥಿರ ಅಭಿವೃದ್ಧಿಗೆ ಅವಕಾಶಗಳ ಬಗ್ಗೆ ಹಾಗೂ ಸ್ವಚ್ಛ ತ್ಯಾಜ್ಯ ಮುಕ್ತ ಮನೆ ಮಾದರಿ ಗ್ರಾಮ ಅಭಿಯಾನ, ಎನ್. ಆರ್. ಎಲ್.ಎಂ. ಸಂಜೀವಿನಿ ಒಕ್ಕೂಟದ ಸಾಲ ಸೌಲಭ್ಯಗಳ ಬಗ್ಗೆ ಸಂವಾದ ನಡೆಯಿತು.
ಪಿಡಿಓ ವಸಂತಿ, ಕೊರೊನಾ ವಿರುದ್ಧದ ಲಸಿಕೆ ಅಭಿಯಾನದ ನೋಡಲ್ ಸಂಸ್ಥೆಯ ಕೃಷ್ಣ ಮೂಲ್ಯ, ಅಂಗನವಾಡಿ ಮೇಲ್ವಿಚಾರಕಿ ಸೋಮಕ್ಕ, ಸಿ. ಎಚ್. ಒ. ಲೀಮಾ ಹಾಗೂ ಕಾರ್ಯದರ್ಶಿ ರಾಮಣ್ಣ ರವರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿ ನಿರೂಪಿಸಿ, ಅಂಗನವಾಡಿ ಮೇಲ್ವಿಚಾರಕಿ ಸೋಮಕ್ಕ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಸುಲೋಚನಾ ವಂದಿಸಿದರು.