ಸಾಂದರ್ಭಿಕ ಚಿತ್ರ
ಕಳೆದ ಎರಡು ದಿನಗಳಿಂದ ಕರಾವಳಿಯಲ್ಲಿ ಮೋಡ ಕವಿದ ವಾತಾವರಣ ಇದ್ದು ಶುಕ್ರವಾರ ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಭಾಗದಲ್ಲಿ ಇಂದು ಬೆಳ್ಳಂ ಬೆಳಗ್ಗೆ ಭಾರೀ ಮಳೆಯಾಗಿದ್ದು, ಕೆಲ ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದೆ.
ಅಕಾಲಿಕ ಮಳೆ ರೈತರನ್ನು ಕಂಗೆಡಿಸಿದ್ದು, ಅಂಗಳದಲ್ಲಿ ಒಣ ಹಾಕಿದ ಅಡಿಕೆಯನ್ನು ಮಳೆಯ ನೀರು ಬೀಳದಂತೆ ರಕ್ಷಣೆ ಮಾಡುವ ಚಿಂತೆ ಅಡಿಕೆ ಬೆಳೆಗಾರದ್ದಾಗಿದೆ.
ಪುತ್ತೂರು, ಬಂಟ್ವಾಳ ಸೇರಿದಂತೆ ಹಲವೆಡೆ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆ ಈ ಭಾಗಗಳಲ್ಲೂ ಮಳೆಯಾಗುವ ಸಂಭವವಿದೆ.