ಟೀಂ ಇಂಡಿಯಾದ ಉಪನಾಯಕ ಕೆ.ಎಲ್.ರಾಹುಲ್ 11 ವರ್ಷದ ಕ್ರಿಕೆಟಿಗನ ಶಸ್ತ್ರಚಿಕಿತ್ಸೆಗಾಗಿ 31 ಲಕ್ಷ ರೂಪಾಯಿ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ವರದ್ ನಲವಡೆ ಎಂಬ 11 ವರ್ಷದ ಬಾಲಕ ಬ್ಲಡ್ ಡಿಸಾರ್ಡರ್ನಿಂದ ಬಳಲುತ್ತಿದ್ದಾನೆ. ಹೀಗಾಗಿ ಬಿಎಂಟಿ (Bone Marrow Transplant)ಚಿಕಿತ್ಸೆಗೆ 31 ಲಕ್ಷ ರೂಪಾಯಿ ಹಣವನ್ನ ಕೆ.ಎಲ್. ರಾಹುಲ್ ನೀಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಡಿಸೆಂಬರ್ನಿಂದ ಕ್ಯಾನ್ಸರ್ ರೋಗಕ್ಕೆ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ಡಿಸೆಂಬರ್ನಲ್ಲಿ ವರದ್ ಕುಟುಂಬಸ್ಥರು 35 ಲಕ್ಷ ರೂಪಾಯಿ ಹಣಕ್ಕಾಗಿ ಕ್ಯಾಂಪೇನ್ ಮಾಡಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಕೆ.ಎಲ್.ರಾಹುಲ್ ಮತ್ತು ಅವರ ತಂಡ 31 ಲಕ್ಷ ರೂಪಾಯಿ ಹಣವನ್ನ ನೀಡಿದೆ.
ಸದ್ಯ ಬಾಲಕ ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವರದಿಗಳ ಪ್ರಕಾರ ಬಾಲಕನ ಬ್ಲಡ್ ಪ್ಲೇಟ್ಲೆಟ್ ಲೇವಲ್ ತುಂಬಾ ಕಡಿಮೆ ಇದೆ. ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕೂಡ ತುಂಬಾನೆ ಕಡಿಮೆ ಇದೆ ಅಂತಾ ಹೇಳಲಾಗಿದೆ. ಅಂದ್ಹಾಗೆ ವರದ್ ಕೂಡ ಕ್ರಿಕೆಟಿಗನಾಗಿದ್ದು, ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ಆಡಬೇಕು ಅನ್ನೋ ಕನಸು ಕಂಡಿದ್ದಾನಂತೆ.