ಪುತ್ತೂರು: ಎರಡು ದಿನಗಳ ಹಿಂದೆ ಕೊಲೆಯಾದ ಬೆಳ್ತಂಗಡಿ ಕನ್ಯಾಡಿಯ ದಲಿತ ಕುಟುಂಬದ ಕೂಲಿ ಕಾರ್ಮಿಕ ದಿನೇಶ್ ಕುಟುಂಬಕ್ಕೆ ಪುತ್ತೂರು ನಗರ ಸಭಾ ಸದಸ್ಯ ಮಹಮ್ಮದ್ ರಿಯಾಝ್ ಎರಡು ತಿಂಗಳ ನಗರ ಸಭಾ ಗೌರವ ನಿಧಿ ನೀಡುವ ಮೂಲಕ ನೆರವಾಗಿದ್ದಾರೆ.
ದಿನೇಶ್ ಕುಟುಂಬದವರು ಬಡ ವರ್ಗದವರಾಗಿದ್ದು, ದಿನೇಶ್ ಸಾವನ್ನಪ್ಪಿದ ನಂತರ ಈ ಕುಟುಂಬಕ್ಕೆ ಮತ್ತಷ್ಟು ಆರ್ಥಿಕ ಸಂಕಷ್ಟವಾಗಿದ್ದು, ರಿಯಾಜ್ ರವರು ತಮ್ಮ ಎರಡು ತಿಂಗಳ ನಗರ ಸಭಾ ಗೌರವ ನಿಧಿಯನ್ನು ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಫೆ. 23 ರಂದು ಬೆಳಿಗ್ಗೆ ರಾಮ ಮಂದಿರದ ಮುಂಭಾಗದಲ್ಲಿ ಅಂಗಡಿಯೊಂದರ ಬಳಿ ಆರೋಪಿ ಕಿಟ್ಟ ಯಾನೆ ಕೃಷ್ಣ ಹಲ್ಲೆ ನಡೆಸಿದ್ದಾನೆಂದು ಆರೋಪ ವ್ಯಕ್ತವಾಗಿತ್ತು.
ತೀವ್ರ ಅಸ್ವಸ್ಥಗೊಂಡು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿನೇಶ್ ರವರು ಫೆ 25ರ ನಸುಕಿನ ವೇಳೆ ಮೃತಪಟ್ಟಿದ್ದರು. ಈ ಬಗ್ಗೆ ದಿನೇಶ್ ತಾಯಿ ಪದ್ಮಾವತಿಯವರು ಠಾಣೆಗೆ ದೂರು ನೀಡಿದ್ದರು. ಆರೋಪಿ ಕೃಷ್ಣ ನು ದಿನೇಶ್ ಮೇಲೆ ಹಾಡುಹಗಲೇ ಹಲ್ಲೆ ನಡೆಸಿ ಥಳಿಸುತ್ತಿದ್ದಾರೆ ಎನ್ನಲಾದ ಸಿಸಿಟಿವಿ ವಿಡಿಯೋ ವೊಂದು ವೈರಲ್ ಆಗಿತ್ತು.