ವಿಟ್ಲ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಲ್ಯಾಪ್ ಟಾಪ್ ಮತ್ತು ಆಪಲ್ ಕಂಪೆನಿ ವಾಚ್ ಅನ್ನು ಕಳವುಗೈದ ಘಟನೆ ಪುಣಚ ಗ್ರಾಮದ ಅಜ್ಜಿನಡ್ಕ ಎಂಬಲ್ಲಿ ನಡೆದಿದೆ.
ಘಟನೆ ಕುರಿತು ಮಹಮ್ಮದ್ ಸಿರಾಜ್ ಎಂಬವರು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿರಾಜ್ ರವರ ಅತ್ತಿಗೆ ಅವರ ತಾಯಿ ಮನೆಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ಲ್ಯಾಪ್ ಟಾಪ್ ಮತ್ತು ಆಪಲ್ ಕಂಪೆನಿ ವಾಚ್ ಅನ್ನು ಕಳವುಗೈದು ಪರಾರಿಯಾಗಿದ್ದಾರೆ.
ಸಿರಾಜ್ ರವರ ಅಣ್ಣ ಮಹಮ್ಮದ್ ಆಲಿ ರವರ ಮೊಬೈಲ್ ಗೆ ಮನೆಯ ಸಿಸಿ ಟಿವಿ ಕನೆಕ್ಟ್ ಆಗಿದ್ದು, ಆಲಿ ರವರು ಮೊಬೈಲ್ ನಲ್ಲಿ ಮನೆಯ ಸಿಸಿ ಟಿವಿ ಪರಿಶೀಲನೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸಿರಾಜ್ ಗೆ ಮಾಹಿತಿ ನೀಡಿದಾಗ ರಾತ್ರಿ ಸಿರಾಜ್ ಮನೆ ಬಳಿ ಬಂದು ನೋಡಿದಾಗ ಮನೆಯ ಹಿಂಬದಿ ಬಾಗಿಲನ್ನು ಮುರಿದು, ಒಳ ಪ್ರವೇಶಿಸಿದ ಕಳ್ಳರು ರೂಮ್ ನ ಕಪಾಟಿನಲ್ಲಿದ್ದ ಡೆಲ್ ಕಂಪೆನಿಯ ಲ್ಯಾಪ್ ಟಾಪ್, ಆಪಲ್ ಕಂಪೆನಿಯ ವಾಚ್, ಎರಡರ ಅಂದಾಜು ಮೌಲ್ಯ 45,000 ಆಗಿದ್ದು, ಅವುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅಕ್ರ.34/2022 ಕಲಂ:454,457,380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.