ಪುತ್ತೂರು: ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು ಮತ್ತು ದ್ವಾರಕಾ ಕನ್ಸ್ಟ್ರಕ್ಷನ್ ವತಿಯಿಂದ ಕೊಡುಗೆಯಾಗಿ ನೀಡಲ್ಪಟ್ಟ, ಕೃಷ್ಣನಗರ ಮತ್ತು ಬಡಾವು ವೃತ್ತ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಿಂದ ಪಡೀಲು ಹಾಗೂ ಕೇಪುಳುವಿನಲ್ಲಿ ನಿರ್ಮಾಣಗೊಂಡ ಪ್ರಯಾಣಿಕರ ತಂಗುದಾಣವನ್ನು ಮಾ.20 ರಂದು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು.
ಕೃಷ್ಣನಗರ-ಬಡಾವು ವೃತ್ತ ಉದ್ಘಾಟಿಸಿದ ಬಳಿಕ ಮಾತನಾಡಿದ ಶಾಸಕರು, 4 ವರ್ಷದ ಹಿಂದೆ ನಗರಸಭೆ ಚುನಾವಣೆ ಸಂದರ್ಭ ಪುತ್ತೂರು ನಗರಸಭೆ ಹೇಗಿರಬೇಕೆಂದು ಜನರ ಅಭಿಪ್ರಾಯ ಪಡೆದು, ಸುಂದರ ಸ್ವಚ್ಛ ನಗರಸಭೆ ಆಗಬೇಕೆಂಬ ಜನರ ಕಲ್ಪನೆಯಂತೆ ಕಾರ್ಯಕ್ರಮ ಅನುಷ್ಠಾನದ ಭರವಸೆ ನೀಡಿದ್ದೇವೆ.
ಆ ಭರವಸೆಯನ್ನು ಅಕ್ಷರಶ: ಈಡೇರಿಸುವ ಕೆಲಸ ನಗರಸಭೆಯಿಂದ ಆಗಿದೆ. ಇವತ್ತು ಕೃಷ್ಣನಗರದಲ್ಲಿ ಸುಂದರ ವೃತ್ತ ನಿರ್ಮಾಣದಲ್ಲಿ ಸಾರ್ವಜನಿಕರಿಂದ ಯಾವುದೇ ದೇಣಿಗೆ ಸಂಗ್ರಹಿಸದೆ ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು ಮತ್ತು ಕೊಡುಗೆಯಾಗಿ ನೀಡಿದ ದ್ವಾರಕಾ ಕನ್ಸ್ಟ್ರಕ್ಷನ್ ಹೃದಯ ಶ್ರೀಮಂತಿಕೆಗೆ ಅಭಿನಂದಿಸಿದರು. ನಗರಸಭೆ ವ್ಯಾಪ್ತಿಯಲ್ಲಿ ಸರ್ವಋತು ರಸ್ತೆ, ರಾತ್ರಿ ಹೊತ್ತು ದಾರಿ ದೀಪ, ಬಸ್ ತಂಗುದಾಣ, ರಸ್ತೆ ದಾಟುವ ಸಂದರ್ಭದಲ್ಲಿ ವೃತ್ತದ ರಚನೆ, ರಿಪ್ಲೆಕ್ ಗಳು, ಸಿಗ್ನಲ್‌ಗಳು ಸೂಚನಾ ಫಲಕದೊಂದಿಗೆ ಜನೋಪಯೋಗಿ ರಸ್ತೆ ನಿರ್ಮಾಣವಾಗಿದೆ ಎಂದರು.
ಪುತ್ತೂರು- ಉಪ್ಪಿನಂಗಡಿ ರಸ್ತೆ ರಾಷ್ಟ್ರೀಯ ಹೆದ್ದಾರಿ 75 ರಿಂದ ರಾಷ್ಟ್ರೀಯ ಹೆದ್ದಾರಿ 275ರನ್ನು ಕೇವಲ 10 ನಿಮಿಷದಲ್ಲಿ ಸಂಪರ್ಕ ಮಾಡುವ ವ್ಯವಸ್ಥೆ ಆಗುವ ನಿಟ್ಟಿನಲ್ಲಿ ಸುಮಾರು 28 ರೂ. ಕೋಟಿ ಹಣ ಈ ರಸ್ತೆಗೆ ಇಡಲಾಗಿದೆ. ಬರುವ ವರ್ಷಕ್ಕೆ ಶೇ.75 ಕಾಮಗಾರಿ
ಪೂರ್ಣಗೊಳ್ಳುತ್ತದೆ.
ಕಾಮಗಾರಿ ಮುಗಿದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣ ಆಗಲಿದೆ. ಈಗಾಗಲೇ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ
3 ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ ಆಗಿದೆ. ಮುಂದೆ ನಾಲ್ಕು ಪ್ರಯಾಣಿಕರ ತಂಗುದಾಣ ನಿರ್ಮಾಣ ಆಗಲಿದೆ. ಒಟ್ಟು
ಪುತ್ತೂರಿನಿಂದ ಉಪ್ಪಿನಂಗಡಿ ತನಕ ಒಂದೇ ಮಾದರಿಯ ಹೈಟೆಕ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಆಗಲಿದೆ ಎಂದರು.
ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭಾ ಸದಸ್ಯರಾದ ಸುಂದರ ಪೂಜಾರಿ ಬಡಾವು, ಪದ್ಮನಾಭ ನಾಯ್ಕ್, ಗೌರಿ ಹೆಚ್, ಲೀಲಾವತಿ, ಪಡೀಲ್, ಬೂತ್ ಅಧ್ಯಕ್ಷ ವಿಠಲ್ ದಾಸ್ ಹಾರಾಡಿ, ಉಪಾಧ್ಯಕ್ಷ ವಿಜಯ, ಸುಕೀರ್ತಿ, ಅರ್ಪಣಾ, ರಾಜೀವಿ, ಸುಧೀರ್ ಶೆಟ್ಟಿ, ನವೀನ್ ಪೆರ್ನೆ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ರಾಮದಾಸ್ ಹಾರಾಡಿ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಶಾಂತಿವನ, ಕೃಷ್ಣ ಕುಮಾರ್, ತಾ.ಪಂ ಮಾಜಿ ಸದಸ್ಯ ಹರೀಶ್ ಬಿಜತ್ರೆ, ವಿಶ್ವನಾಥ ಕುಲಾಲ್, ಕೃಷ್ಣನಗರ ಬೂತ್ ಅಧ್ಯಕ್ಷ ಜಯಾನಂದ್, ನಗರ ಕಾರ್ಯದರ್ಶಿ ಅಶೋಕ್ ಹಾರಾಡಿ, ಪ್ರವೀಣ್, ರವೀಶ್, ಕೇಶವ ಪೂಜಾರಿ, ನಾರಾಯಣ ಕೇಪುಳು, ಕೆಮ್ಮಾಯಿ ಬೂತ್ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ, ಕಾರ್ಯದರ್ಶಿ ಪ್ರಶಾಂತ್ ಕೃಷ್ಣನಗರ, ಹರೀಶ್ ಕುಲಾಲ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ಪಡೀಲ್ ನಲ್ಲಿ ಉದ್ಘಾಟನೆಗೊಂಡ ಪ್ರಯಾಣಿಕರ ತಂಗುದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಆಸನದ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಇದನ್ನು ಗಮನಿಸಿದ ಶಾಸಕರು, ತಕ್ಷಣ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡಿದರು.