ಪುತ್ತೂರು: ರಸ್ತೆಯಲ್ಲಿನ ಹಂಪ್ಸ್ ತಿಳಿಯದೆ ಹಂಪ್ಸ್ ಮೇಲೆಯೇ ವೇಗವಾಗಿ ಬಸ್ ಚಲಿಸಿದ ಹಿನ್ನೆಲೆ ಬಸ್ ನಲ್ಲಿದ್ದ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ಬೊಳ್ವಾರಿನಲ್ಲಿ ನಡೆದಿದೆ.
ಕಾಸರಗೋಡಿನಿಂದ ಪುತ್ತೂರಿಗೆ ಬರುತ್ತಿದ್ದ ಬಸ್ ಹಂಪ್ಸ್ ಮೇಲೆಯೇ ವೇಗವಾಗಿ ಚಲಿಸಿದ ಹಿನ್ನೆಲೆ ಬಸ್ ನಲ್ಲಿದ್ದ ವ್ಯಕ್ತಿಯೋರ್ವರ ಹಣೆಗೆ ಗಾಯವಾಗಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ.
ಪುತ್ತೂರು-ಮಂಗಳೂರು ರಸ್ತೆಯ ಬೊಳ್ವಾರಿನ ಹಂಪ್ಸ್ ನಲ್ಲಿ ಈಗಾಗಲೇ ಹಲವಾರು ಅಪಘಾತಗಳು ನಡೆದಿದ್ದು, ಈ ರಸ್ತೆಯಲ್ಲಿ ಹಂಪ್ಸ್ ನಿರ್ಮಿಸಿರುವುದು ಅಪಾಯಕಾರಿಯಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ಟ್ರೊಲ್ ಗಳು ವೈರಲ್ ಆಗುತ್ತಿದೆ.