ವಿಟ್ಲ: ವಾಹನದಲ್ಲಿ ದನ ಸಾಗಾಟ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವರು ನಿಲ್ಲಿಸಲು ಸೂಚನೆ ನೀಡಿದಾಗ ನಿಲ್ಲಿಸದೆ ದನಗಳನ್ನು ರಸ್ತೆ ಬದಿ ಇಳಿಸಿ ನಾಪತ್ತೆಯಾದ ಘಟನೆ ಪೆರುವಾಯಿ ಕಡೆಂಗೋಡ್ಲುನಲ್ಲಿ ನಡೆದಿದೆ.
ಈ ಬಗ್ಗೆ ವ್ಯಕ್ತಿಯೋರ್ವರು ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಠಾಣೆಗೆ ದೂರು ನೀಡಿದ್ದಾರೆ.
ಮಾ.29 ರಂದು ಸಾಯಂಕಾಲ ಪೆರುವಾಯಿ ಗ್ರಾಮದ ಕಡೆಂಗೋಡ್ಲು ಎಂಬಲ್ಲಿರುವ ಕುದ್ದುಪದವು ಕಡೆಯಿಂದ ಮುರುವ ಕಡೆಗೆ ಕೆಎಲ್-14 -ಎಸ್ -1943 ನೇಯದರಲ್ಲಿ ಪಿಕ್ ಆಪ್ ವಾಹನ ಚಾಲಕನು ಕಪ್ಪು ಬಣ್ಣದ ದನ-01 ಹಾಗೂ ನಸು ಕಂದು ಬಿಳಿ ಬಣ್ಣದ ಕರು-01ನ್ನು ಹತ್ಯೆಗಾಗಿ ಎಲ್ಲಿಂದಲೋ ಹೈನುಗಾರನಿಂದ ಖರೀದಿಸಿ ಸಾಗಾಟ ಮಾಡಿರುವುದನ್ನು ಕಂಡ ಸ್ಥಳೀಯ ವ್ಯಕ್ತಿಯೋರ್ವರು ನಿಲ್ಲಿಸಲು ಸೂಚನೆ ನೀಡಿದ್ದಕ್ಕೆ ಮಂದಕ್ಕೆ ಹೋಗಿ ವಾಹನ ನಿಲ್ಲಿಸಿ ವಾಹನದಿಂದ ಜಾನುವಾರುಗಳನ್ನು ರಸ್ತೆ ಬದಿಯಲ್ಲಿ ಇಳಿಸಿ ಆರೋಪಿಯು ವಾಹನದೊಂದಿಗೆ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
02 ಜಾನುವಾರುಗಳ ಅಂದಾಜು ಮೌಲ್ಯ 12,000/- ರೂ ಆಗಬಹುದು, ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಜಾನುವಾರನ್ನು ಸಾಗಾಟ ಮಾಡಿದ ಆರೋಪಿಗೆ ಮಾರಾಟ ಮಾಡಿದ ಹಾಗೂ ಖರೀದಿಸಿ ಸಾಗಾಟ ಮಾಡುತ್ತಿದ್ದ ಪಿಕ್ ಅಪ್ ವಾಹನ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅ.ಕ್ರ 54/2022 ಕಲಂ:5,7,12 THE KARNATAKA PREVENTION OF SLAUGHTER AND PRESERVATION OF CATTLE ACT-2020 ರಂತೆ ಪ್ರಕರಣ ದಾಖಲಾಗಿದೆ.