ಪುತ್ತೂರು: ದಾದಿಯೊಬ್ಬಳ ನಿರ್ಲಕ್ಷ್ಯಕ್ಕೆ ಕೆಲವೇ ವಾರದ ಹಿಂದೆ ಜನನವಾಗಿದ್ದ ಮಗು ಸಾವನಪ್ಪಿದ ಘಟನೆ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಗಣೇಶ್ ಮತ್ತು ಚೈತ್ರ ದಂಪತಿಗಳ ಕೆಲವೇ ವಾರಗಳ ಪ್ರಾಯದ ಮಗುವನ್ನೂ ಅನಾರೋಗ್ಯದ ಹಿನ್ನೆಲೆ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು.
ಶನಿವಾರ ಮಧ್ಯಾಹ್ನದ ಹೊತ್ತಿಗೆ ಆಸ್ಪತ್ರೆಯ ನರ್ಸ್ ಒಬ್ಬರು ಬಂದು ಮಗುವಿಗೆ ಮೂರು ಡೋಸ್ ಇಂಜೆಕ್ಷನ್ ನೀಡಿದ್ದು ಅಲ್ಲದೆ, ಮಗುವಿನ ಕಫ ತೆಗೆಯಲು ನೇಬುಲೈಸರ್ ಅಳವಡಿಸಿದ್ದಾರೆ. ಪೈಪು ಸಿಕ್ಕಿಸಿ ಮಗು ಚೀರಿಕೊಂಡು ಅಳುತ್ತಿದ್ದರೂ ಸೀದಾ ನಿರ್ಲಕ್ಷದಿಂದ ಹೊರ ಹೋಗಿದ್ದಾಳೆ ಎಂದು ಮನೆಯವರು ಆರೋಪಿದ್ದಾರೆ.
ಉಸಿರಾಡಲು ಒದ್ದಾಡುತಿದ್ದಂತೆ ಮಗುವಿನಲ್ಲಿ ಚಟುವಟಿಕೆಗಳು ಕಮ್ಮಿಯಾಗಿವೆ. ಹೆದರಿಕೊಂಡ ಮನೆಯವರು ಕೂಡಲೇ ಆಸ್ಪತ್ರೆಯ ಕೌಂಟರ್ ಗೆ ಮಗುವನ್ನು ಎತ್ತಿಕೊಂಡು ಓಡಿದ್ದಾರೆ. ಅಲ್ಲಿ ಮಗುವನ್ನು ಪರೀಕ್ಷಿಸಿದ ಇತರ ನರ್ಸ್ ಗಳು ಅದಾಗಲೇ ಮಗು ಸಾವನ್ನಪ್ಪಿದ ವಿಷಯವನ್ನು ಮನೆಯವರಿಗೆ ತಿಳಿಸಿದ್ದಾರೆ. ತಪ್ಪಿತಸ್ಥ ನರ್ಸ್ ಗೆ ತಕ್ಕ ಶಿಕ್ಷೆ ವಿಧಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.ಈ ಬಗ್ಗೆ ಮಗುವಿನ ತಂದೆ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.