ಸುಳ್ಯ: ಕೃಷಿ ಪತ್ತಿನ ಸಹಕಾರಿ ಸಂಘದ ಹೊಸ ಕಟ್ಟಡದಲ್ಲಿ ಸಂಘದ ವ್ಯವಹಾರಗಳನ್ನು ಲೆಕ್ಕ ಇರಿಸಿಕೊಳ್ಳಲು ತಂದಿಟ್ಟಿದ್ದ ಅಪಾರ ಮೌಲ್ಯದ ವಸ್ತುವನ್ನು ಕಳವು ಮಾಡಿರುವ ಘಟನೆ ಸುಳ್ಯದ ಮುರುಳ್ಯ ಗ್ರಾಮದಲ್ಲಿ ನಡೆದಿದೆ.
ಮುರುಳ್ಯ ಗ್ರಾಮದ ಮುರುಳ್ಯ -ಎಣ್ಮೂರು ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಅಲೆಕ್ಕಾಡಿ ಕಟ್ಟಡದಲ್ಲಿ ತಂದಿಟ್ಟಿದ್ದ ಮಾನಿಟರ್-2, ಕಂಪ್ಯೂಟರ್-1 ಸೇರಿದಂತೆ LED ಸ್ಮಾರ್ಟ್ ಟಿವಿಗಳು ಸೇರಿದಂತೆ 1.52 ಲಕ್ಷ ರೂಪಾಯಿ ಮೌಲ್ಯದ ವಸ್ತುವನ್ನು ಮಾ.18 ರಿಂದ ನಿನ್ನೆಯ ನಡುವಿನ ಅವಧಿಯಲ್ಲಿ ಯಾರೋ ದರೋಡೆ ಮಾಡಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಸಹಕಾರಿ ಸಂಘ ಸುಳ್ಯ ತಾಲೂಕು ನಿಯಮಿತ ಅಲೆಕ್ಕಾಡಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿದಾನಂದ ರೈ ಎನ್ ದೂರು ನೀಡಿದ್ದು, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.